ಬೆಳ್ತಂಗಡಿ ಬಂಟರ ಸಂಘದ ನಿರ್ದೇಶಕ ದಯಾನಂದ ಶೆಟ್ಟಿ ಯೈಕುರಿ ನಿಧನ

 

 

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ನಿರ್ದೇಶಕ ವಿದ್ಯಾ ಕ್ಯಾಟರಿಂಗ್ ನ ಮಾಲಕ ದಯಾನಂದ ಶೆಟ್ಟಿ ಯೈಕುರಿ ಬಳೆಂಜ ಇವರು ತೀವ್ರ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.
ಅನಾರೋಗ್ಯದ ಕಾರಣಕ್ಕಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಇವತ್ತು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸಾಧು ಸ್ವಭಾವ ಹಾಗೂ ಕೊಡುಗೈ ದಾನಿಗಳಾಗಿ ಎಲ್ಲರಲ್ಲೂ ಸದಾ ಆತ್ಮೀಯತೆಯಿಂದ ಇರುತಿದ್ದರು. ಇಬ್ಬರು ಮಕ್ಕಳನ್ನು ಹೊಂದಿರುವ ಇವರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

error: Content is protected !!