ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ರವಿಚಂದ್ರ ಎಂಬವರ ತೋಟಕ್ಕೆ ಬುಧವಾರ ರಾತ್ರಿ ದಾಳಿ ಇಟ್ಟಿರುವ ಕಾಡಾನೆ ನೂರಕ್ಕಿಂತ ಅಧಿಕ ಫಲಬಿಟ್ಟ ಬಾಳೆಗಿಡ ಹಾಗೂ ಎರಡು ತೆಂಗಿನ ಮರಗಳನ್ನು ಧ್ವಂಸಗೈದಿದೆ. ಇದರಿಂದ ಸಾವಿರಾರು ರೂ.ಮೌಲ್ಯದ ಕೃಷಿ ನಷ್ಟ ಸಂಭವಿಸಿದೆ.
ಎರಡು ತಿಂಗಳ ಹಿಂದೆ ಮುಂಡಾಜೆ,ಚಿಬಿದ್ರೆ, ಕಡಿರುದ್ಯಾವರ ತೋಟತ್ತಾಡಿ,ನೆರಿಯ, ಚಾರ್ಮಾಡಿ ಮೊದಲಾದ ಗ್ರಾಮಗಳ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ಹಾಗೂ ಕಾಡಾನೆಗಳ ಹಿಂಡು ಅನೇಕರ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ನಷ್ಟ ಉಂಟಾಗಿತ್ತು.
ಬಳಿಕ ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಘಾಟಿ ಸನಿಹದ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ ಭಾರಿ ಪ್ರಮಾಣದ ಕೃಷಿ ಹಾನಿ ಉಂಟಾಗಿತ್ತು.ಈಗ ಇದೇ ಆನೆಗಳ ಹಿಂಡು ಚಾರ್ಮಾಡಿ ಕಡೆ ಬಂದಿರುವ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.