ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ 15 ನೇ ಶಾಖೆ ಕೊಕ್ಕಡದಲ್ಲಿ ಪ್ರಾರಂಭ

ಬೆಳ್ತಂಗಡಿ: ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ನೂತನ 15 ನೇ ಶಾಖೆ ಕೊಕ್ಕಡದಲ್ಲಿ ಅಗಸ್ಟ್ 21 ಶನಿವಾರ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಪಿ.ಸಿ. ಜಯರಾಮ ಹೇಳಿದರು.

ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ 1997 ರಲ್ಲಿ 435 ಜನರಿಂದ ಪ್ರಾರಂಭವಾದ ಈ ಸಂಘದಲ್ಲಿ ಈಗಾಗಲೇ 3.27 ಪಾಲು ಬಂಡವಾಳ ಸಂಗ್ರಹಿಸಿ ಸಂಘದಲ್ಲಿ 103 ಕೋ‌ ಠೇವಣಿ ಸಂಗ್ರಹ ಹಾಗೂ 90 ಕೋ ಮಿಕ್ಕಿ ವಿವಿಧ ಸಾಲಗಳನ್ನು ವಿತರಿಸಲಾಗಿದೆ. ಸಂಘವು ಪ್ರಾರಂಭದಿಂದಲೂ ಲಾಭದಲ್ಲಿ ನಡೆಯುತಿದ್ದು ಈ ಸಹಕಾರ ವರ್ಷದಲ್ಲಿ ರೂ 1 ಕೋ ಮಿಕ್ಕಿ ನಿವ್ವಳ ಲಾಭ ಗಳಿಸಿರುತ್ತೇವೆಂದು ತಿಳಿಸಲು ಹೆಮ್ಮೆ ಪಡುತ್ತೇವೆ ಸದಸ್ಯರುಗಳಿಗೆ ಸರಾಸರಿ ಶ 15 ಡಿವಿಡೆಂಡ್ ವಿತರಿಸುತ್ತಾ ಬಂದಿದ್ದು ಈ ಸಹಕಾರಿ ವರ್ಷದಲ್ಲಿ ವಾರ್ಷಿಕ ರೂ 450 ಕೋಟಿ ಮಿಕ್ಕಿ ವ್ಯವಹಾರವನ್ನು ನಡೆಸಿರುತ್ತೇವೆ.‌

ನೂತನ ಕೊಕ್ಕಡ ಶಾಖೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ದೀಪ ಪ್ರಜ್ವಲನೆಗೈಯಲ್ಲಿದ್ದಾರೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ.‌ಜಯರಾಮ ವಹಿಸಲಿದ್ದಾರೆ. ಶಾಖೆಯ ಭದ್ರತಾ ಕೊಠಡಿಯನ್ನು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ನೆರವೇರಿಸಲಿದ್ದಾರೆ. ಗಣಕೀಕರಣವನ್ನು ಕೊಕ್ಕಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ ಮಾಡಲಿದ್ದಾರೆ.

ಸಂಘವು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ14 ಶಾಖೆಗಳನ್ನು ಹೊಂದಿದ್ದು ಕೊಕ್ಕಡದಲ್ಲಿ 15 ನೇ ಶಾಖೆ ಉದ್ಘಾಟನೆಯಾಗಲಿದೆೆ.  ಮುಂದಿನ ವರುಷ 25 ನೇ ವರುಷದ ಬೆಳ್ಳಿ ವರ್ಷಚಾರಣೆಯ ಸಂಭ್ರಮದಲ್ಲಿ ಇರುವ ಸಂಘವು 25 ಶಾಖೆಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಿಎಸ್ ಗಂಗಾಧರ್, ಕೆ.ಟಿ. ವಿಶ್ವನಾಥ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.

error: Content is protected !!