ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಮಧ್ಯಾಹ್ನ 3-30 ಕ್ಕೆ ಪ್ರಕಟ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ‌ ಜೂನ್ 19ರಿಂದ 22 ರವರೆಗೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಸಂಜೆ 3-30 ಗಂಟೆಗೆ ಪ್ರಕಟಿಸಲು ಪರೀಕ್ಷಾ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಶೇ 99.65 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಆರು ವಿಷಯಗಳ ಪರೀಕ್ಷೆಯು ಕೇವಲ ಎರಡು ದಿನದಲ್ಲಿ ಪೂರ್ಣವಾಗಿದ್ದು ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳಿಗೆ ಎರಡು ಪರೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿ ಪಡೆದ ಅಂಕಗಳನ್ನು ದ್ವಿಗುಣಗೊಳಿಸಿ ಒಟ್ಟು ಅಂಕಗಳ ಮೂಲಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಪರೀಕ್ಷೆ ಬರೆದ ಯಾರನ್ನೂ ಅನುತೀರ್ಣ ಗೊಳಿಸದೇ ಎಲ್ಲರೂ ಉತ್ತೀರ್ಣ ಎಂದು ಈಗಾಗಲೇ ಘೋಷಿಸಲಾಗಿದೆ‌. ಅಂಕ ತೃಪ್ತಿಕರವಾಗಿಲ್ಲದಿದ್ದರೆ ಪಿಯುಸಿ ಮಾದರಿಯಲ್ಲಿ ಮಕ್ಕಳು ಮತ್ತೊಮ್ಮೆ ಪರೀಕ್ಷೆ ಬರೆಯಬಹುದು ಎಂದು ಹೇಳಿದ್ದಾರೆ.

ಅಧಿಕೃತ ವೆಬ್‌ಸೈಟ್​​ನಲ್ಲಿ ಫಲಿತಾಂಶ:

ಎಸ್ಎಸ್ಎಲ್‌ಸಿ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ನೋಂದಾಯಿತ ಮೊಬೈಲ್ ನಂಬರ್‌ಗೆ ಎಸ್ಎಂಎಸ್ ಮೂಲಕ ಸಂದೇಶ ರವಾನೆಯಾಗಲಿದೆ.‌ ಹಾಗೆಯೇ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ www.sslc.kar.nic.in ಅಥವಾ karresults.nic.in ಫಲಿತಾಂಶ ಲಭ್ಯವಿರಲಿದೆ

error: Content is protected !!