ಕಾಲೇಜಿನ ಗೇಟ್ ಬಿದ್ದು ಆಟವಾಡುತಿದ್ದ ಬಾಲಕ ದಾರುಣ ಸಾವು.

 

 

ಚಿಕ್ಕೋಡಿ: ಆಟವಾಡುತಿದ್ದ 10 ವರುಷದ ಬಾಲಕನ ಮೇಲೆ
ಪಟ್ಟಣದ ಆರ್​ಡಿ ಕಾಲೇಜಿನ ಮುಖ್ಯ ದ್ವಾರದ ಗೇಟ್ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಟ್ಟಣದ ಇಂದ್ರಾ ನಗರ ನಿವಾಸಿ ಸುಫೀಯಾನ ರಾಜು ಮುಲ್ಲಾ (10) ಸ್ಥಳದಲ್ಲೇ ಸಾವನ್ನಪ್ಪಿರುವ ಬಾಲಕ ಎಂದು ಗುರುತಿಸಲಾಗಿದೆ.
ಗೇಟ್ ಮುಂದೆ ಸುಫೀಯಾನ ರಾಜು ಮುಲ್ಲಾ ಆಟವಾಡುತ್ತಿರುವಾಗ ರಭಸವಾಗಿ ಬೀಸಿದ ಗಾಳಿಗೆ ಗೇಟ್ ಆತನ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಈ ಘಟನೆಯ ಮಾಹಿತಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!