ಆಕಾಶದಲ್ಲಿ ಹಾರಾಡಲಿದೆ ಎಲೆಕ್ಟ್ರಿಕ್​ ಹೆಲಿಕಾಪ್ಟರ್​..!: ದೆಹಲಿಯಲ್ಲಿ ’’ಸಿಟಿ ಏರ್​​ಬಸ್’’​​ ಪರೀಕ್ಷೆ ಯಶಸ್ವಿ

ನವದೆಹಲಿ: ಏರ್‌ಬಸ್ ಹೆಲಿಕಾಪ್ಟರ್‌ ಕಂಪನಿಯು ಪೂರ್ಣ ಪ್ರಮಾಣದ ವಿದ್ಯುತ್ ಚಾಲಿತ ಸಿಟಿ ಏರ್‌ಬಸ್‌ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಏರ್​ಬಸ್​​, ಯುಎಎಂ ಪ್ರದರ್ಶಕವು 2,130 ಕೆಜಿ ಭಾರ ಹೊತ್ತು ಹೊರಟಿದ್ದು, 20 ಮೀಟರ್​ ಎತ್ತರದಲ್ಲಿ ನಾಲ್ಕು ನಿಮಿಷಗಳ ಡೆಮೊ ಹಾರಾಟ ನಡೆಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಕಂಪನಿಯ ಪ್ರಕಾರ, ಚಾಪರ್ ರಿಮೋಟ್ ಪೈಲಟ್ ಮಾಡಲಾದ ಎಲೆಕ್ಟ್ರಿಕ್ ವರ್ಟಿಕಲ್​ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ಹಾರಾಟವನ್ನು ನಡೆಸುವಲ್ಲಿ ಯಶಸ್ವಿಯಾಗಿದೆ. ಇದು ಮಲ್ಟಿಕಾಪ್ಟರ್ ಕಾನ್ಫಿಗರೇಶನ್ ಅನ್ನು ಹೊಂದಿದ್ದು, ನಾಲ್ಕು ಹೈ-ಲಿಫ್ಟ್ ಪ್ರೊಪಲ್ಷನ್ ಘಟಕಗಳನ್ನು ಹೊಂದಿದೆ. ಗಂಟೆಗೆ ಸುಮಾರು 120 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ನಾಲ್ವರು ಪ್ರಯಾಣಿಕರನ್ನು ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ವೆಬ್‌ಸೈಟ್ ಹೇಳಿದೆ.

ಕಂಪನಿಯು ಮೇ 2019 ರಲ್ಲಿ ತನ್ನ ಮೊದಲ ಟೇಕ್-ಆಫ್ ನಡೆಸಿದರೂ, ಇತ್ತೀಚಿನ ಪರೀಕ್ಷಾ ಹಾರಾಟ ಬಹಳ ಮುಖ್ಯವಾಗಿದೆ. ಏರ್​ಬಸ್​ 2,130 ಕೆಜಿ ತೂಕದೊಂದಿಗೆ ಟೇಕಾಫ್​ ಆಗಿದೆ. ಈ ಬಸ್​ ಸುಮಾರು 100 ಕ್ಕೂ ಹೆಚ್ಚು ಪರೀಕ್ಷಾ ಹಾರಾಟಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

error: Content is protected !!