ಬೆಳ್ತಂಗಡಿ: ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳ ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರ ಭಕ್ತಿ, ದೇಶದ ಅಭಿವೃದ್ಧಿಯ ಚಿಂತನೆಯೊಂದಿಗೆ ಜನರಲ್ಲಿ ಜಾಗೃತಿಯ ಜತೆಗೆ ರಾಷ್ಟ್ರ ಪ್ರೇಮದ ಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗಾಗಿ ಆನ್ ಲೈನ್ ದೇಶಭಕ್ತಿ ಗೀತೆಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಯೋಮಿತಿಯ ಆಧಾರದಲ್ಲಿ ಐದು ಸ್ಪರ್ಧಾ ವಿಭಾಗವನ್ನು ಮಾಡಲಾಗಿದ್ದು, ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ವಿಭಾಗವನ್ನು ಆಯೋಜಿಸಿದೆ. 1 ರಿಂದ 5 ವರ್ಷ, 5 ರಿಂದ 10 ವರ್ಷ, 10 ರಿಂದ 20 ವರ್ಷ, 20 ರಿಂದ 40 ವರ್ಷ ಹಾಗೂ 40 ವರ್ಷದಿಂದ ಮೇಲ್ಪಟ್ಟ ವಿಭಾಗದಲ್ಲಿ ಆನ್ ಲೈನ್ ಸ್ಪರ್ಧೆ ನಡೆಯಲಿದೆ.
ಪ್ರಥಮ ಬಹುಮಾನವಾಗಿ 10,000 ರೂ., ದ್ವಿತೀಯ ಬಹುಮಾನ 5,000 ರೂ. ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿನ ಸ್ಮರಣಿಕೆಯನ್ನು ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು +91 6366698524 ಈ ವಾಟ್ಸಾಪ್ ನಂಬರ್‌ಗೆ ತಾವು ಹಾಡಿದ ದೇಶ ಭಕ್ತಿಯನ್ನು ರೆಕಾರ್ಡ್ ಮಾಡಿಕೊಂಡ ವಿಡಿಯೋದೊಂದಿಗೆ ಹೆಸರು, ವಿಳಾಸ ಹಾಗೂ ಆಧಾರ್ ಕಾರ್ಡ್‌ನ್ನು ಆಗಸ್ಟ್ 10 ರ ಒಳಗೆ ಕಳುಹಿಸಬೇಕು. ಯಾವುದೇ ರೀತಿಯ ಎಡಿಟಿಂಗ್ ಮಾಡಿದ ವಿಡಿಯೋ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಹಾಗೂ ತೀರ್ಪುಗಾರರ ತೀರ್ಮಾನವೆ ಅಂತಿಮವಾಗಿರುತ್ತದೆ ಎಂದು ಶಾಸಕರ ಕಚೇರಿ ಶ್ರಮಿಕ ಪ್ರಕಟಣೆಯಲ್ಲಿ ತಿಳಿಸಿದೆ.