ಬೆಳ್ತಂಗಡಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ.

ಬೆಳ್ತಂಗಡಿ:ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯು ಬಿಜೆಪಿ ಕಚೇರಿಯಲ್ಲಿ ನಡೆಯಿತು ಸಭೆಯಲ್ಲಿ ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷೆ ಧನಲಕ್ಷೀ ಗಟ್ಟಿ ಭಾಗವಹಿಸಿ ತಾಲೂಕಿನಲ್ಲಿ ಮಹಿಳಾ ಮೋರ್ಚಾಗಳಿಂದ ಮುಂದಿನ ದಿನಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಹಾಗೂ ಸಂಘಟನಾತ್ಮಕವಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ಹಂಚಿಕೊಂಡರು. ಹಾಗೂ ನೂತನವಾಗಿ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಬೆಳ್ತಂಗಡಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿಜಯ ಆರಂಬೊಡಿ ಆದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂದಾರತಿ ಎಸ್ . ಶೆಟ್ಟಿ, ಗೀತಾ ರಾಮಣ್ಣ ಗೌಡ, ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಹಾಗೂ ಲಾಯಿಲ ಗ್ರಾ.ಪಂ ಸದಸ್ಯೆ ಸವಿತಾ ಶೆಟ್ಟಿ, ಅಮಿತಾ ಗೌಡ ಉಪಸ್ಥಿತರಿದ್ದರು.

error: Content is protected !!