ಕೊರೊನಾ ವಾರಿಯರ್ಸ್ ಗಳನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯ: ಪ್ರತಾಪ್ ಸಿಂಹ ನಾಯಕ್ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಕೊರೊನಾ ವಾರಿಯರ್ಸ್ ಗಳಿಗೆ ಅಭಿನಂದನಾ ಕಾರ್ಯಕ್ರಮ

 

 

 

 

ಬೆಳ್ತಂಗಡಿ :   ಪಂಚಾಯತ್  ಅಗತ್ಯ ಸಂದರ್ಭಗಳಲ್ಲಿ    ಎಲ್ಲ ರೀತಿಯಲ್ಲೂ   ಸ್ಪಂದಿಸಿದ ವಾರಿಯರ್ಸ್ ಗಳನ್ನು   ಗುರುತಿಸಿ ಗೌರವಿಸುತ್ತಿರುವುದು ಅಭಿನಂದನೀಯ  ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು ಅವರು ಲಾಯಿಲ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ  ಕೊರೊನಾ ವಾರಿಯರ್ಸ್ ಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ  ಮಾತನಾಡಿದರು. ತಾಲೂಕಿನ ಜನರೊಂದಿಗೆ ಬೆಸೆದು ಎಲ್ಲಾ ರೀತಿಯಲ್ಲೂ  ಅತ್ಯುತ್ತಮ ಕೆಲಸ ಮಾಡುತ್ತಿರುವ  ಯುವ ಶಾಸಕರು ಸಿಕ್ಕಿರುವುದು ನಮ್ಮ ಪುಣ್ಯ. ಕೊರೊನಾ ಸಂದರ್ಭಗಳಲ್ಲಿ ಅವರು ತೆಗೆದುಕೊಂಡ ಕೆಲವೊಂದು ನಿರ್ಧಾರಗಳು  ಎಲ್ಲರಿಗೂ ಮಾದರಿ.ಹಿಂದೆ ಒಂದು ಲಸಿಕೆ ವಿದೇಶದಿಂದ ಭಾರತಕ್ಕೆ ಬರಬೇಕಾದರೆ 20 ವರ್ಷ ಕಾಯಬೇಕಾಗಿತ್ತು ಅದರೆ ಈಗ ಮೊದಲನೇ ಅಲೆ ಮುಗಿದು ಎರಡನೇ ಅಲೆ ಪ್ರಾರಂಭ ವಾಗುವಾಗಲೇ ಲಸಿಕೆ ಕಂಡು ಹಿಡಿದು ಜನರಿಗೆ ಕೊಡುವಂತಹ ವ್ಯವಸ್ಥೆ ಆಗುತ್ತಾ ಇರುವುದಕ್ಕೆ  ಪ್ರಧಾನಿಯವರನ್ನು ಎಲ್ಲರೂ ಅಭಿನಂದಿಸಬೇಕು .ಫ್ರಂಟ್ ಲೈನ್ ವಾರಿಯರ್ಸ್ ಗಳು ಪ್ರಾರಂಭದಲ್ಲಿ ಲಸಿಕೆ ತೆಗದು ಕೊಂಡಿದ್ದರಿಂದ ಎರಡನೇ ಅಲೆ ಸಂದರ್ಭದಲ್ಲಿ ಧೈರ್ಯದಿಂದ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವಾಯಿತು.   ಅದ್ದರಿಂದ ಎಲ್ಲರೂ  ಭಯ ಪಡದೇ ಲಸಿಕೆ ಪಡೆದುಕೊಳ್ಳಬೇಕು  ಎಂದ ಅವರು ಕೊರೊನಾ ಸಂದರ್ಭಗಳಲ್ಲಿ  ಎಲ್ಲಾ ಪಂಚಾಯತ್ ಗಳೂ  ಕಾರ್ಯಪಡೆಗಳ ಮೂಲಕ  ಉತ್ತಮ ರೀತಿಯಲ್ಲಿ   ಕಾರ್ಯ ನಿರ್ವಹಿಸಿವೆ .ಪಂಚಾಯತ್ ಸದಸ್ಯರುಗಳು ಕೂಡ ತಮ್ಮ ವಾರ್ಡಿನ ಜನರ ಕಷ್ಟಕ್ಕೆ  ತಕ್ಷಣ ಸ್ಪಂದಿಸುವುದಲ್ಲದೆ   ಸರ್ಕಾರಗಳ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು  ಎಂದರು.

ಪಂಚಾಯತ್ ಕಾರ್ಯದರ್ಶಿ ಪುಟ್ಟಸ್ವಾಮಿ ಪ್ರಸ್ತಾವಿಸಿ ಕೊರೊನಾ ಸಂದರ್ಭದಲ್ಲಿ  ದಾನಿಗಳು ,  ಕೊರೊನಾ ವಾರಿಯರ್ಸ್ ಹಾಗೂ ಪೊಲೀಸ್ ಇಲಾಖೆ ಪಂಚಾಯತ್ ಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಿದ್ದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಾಗಿದೆ. ಪಂಚಾಯತ್ ವತಿಯಿಂದ ಎಲ್ಲರಿಗೂ ಧನ್ಯವಾದಗಳು ಎಂದರು.
ಕೊರೊನಾ ವಾರಿಯರ್ಸ್ ಗಳ ಪರವಾಗಿ ಉದಯ ಕುಮಾರ್ ಪುತ್ರಬೈಲು ಮಾತನಾಡಿ.ಲಾಯಿಲ ಗ್ರಾಮ ಪಂಚಾಯತ್ ನ ಎಲ್ಲ ವಾರ್ಡ್ ಗಳಲ್ಲೂ ವಾರಿಯರ್ಸ್ ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಪಂಚಾಯತ್ ಆಡಳಿತ ಮಂಡಳಿ ಹಾಗೂ ಸದಸ್ಯರುಗಳು  ನಮ್ಮೊಂದಿಗೆ ಇದ್ದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು ನಮ್ಮ ಸೇವೆಯನ್ನು ಗುರುತಿಸಿ ನಮ್ಮನ್ನು ಕರೆದು ಗೌರವ ನೀಡಿದ್ದಕ್ಕಾಗಿ ಎಲ್ಲಾ ವಾರಿಯರ್ಸ್ ಗಳ ಪರವಾಗಿ ಪಂಚಾಯತ್ ಆಡಳಿತ ಮಂಡಳಿಗೆ ಅಭಿನಂದಿಸುತ್ತೇನೆ  ಅದಲ್ಲದೇ ಮುಂದೆಯೂ  ಉತ್ತಮ ರೀತಿಯ  ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ
ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ದಾನ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ್ದ ಕೆಲವು ಸಮಯಗಳಲ್ಲೆ ಕೊರೊನಾ ಸೋಂಕು ನಮ್ಮ ಗ್ರಾಮದಲ್ಲಿ ಹೆಚ್ಚಾಗುತ್ತಿರುವಾಗ  ಜನರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಪ್ರದೇಶಗಳನ್ನು ಹಾಗೂ ಒಂದು ವಾರಗಳ ಕಾಲ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು ಇಂತಹ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳ ಸೇವೆಯನ್ನು ಯಾವತ್ತೂ ಮರೆಯುವಂತಿಲ್ಲ. ಅದೇ ರೀತಿ ನಮ್ಮ ಶಾಸಕರ ಮಾರ್ಗದರ್ಶನ,  ದಾನಿಗಳ ಮತ್ತು ಗ್ರಾಮದ ಜನರ ಉತ್ತಮ ರೀತಿಯ ಸಹಕಾರ ಪಂಚಾಯತ್ ಆಡಳಿತ ಮಂಡಳಿ ಬೆಂಬಲದಲ್ಲಿ ಕೊರೊನಾ ಹತೋಟಿಗೆ ಬರಲು ಸಾಧ್ಯವಾಯಿತು. ಮುಂದೆಯೂ ಗ್ರಾಮದ ಹಿತದೃಷ್ಟಿಯಿಂದ ಎಲ್ಲರ ಸಹಕಾರವನ್ನು ಬಯಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಎಲ್ಲ ರೀತಿಯಲ್ಲೂ ಪಂಚಾಯತ್ ನೊಂದಿಗೆ ಸಹಕರಿಸಿದ ಕೊರೊನಾ ವಾರಿಯರ್ಸ್ ಗಳನ್ನು ಹಾಗೂ ಬೀಟ್ ಪೊಲೀಸ್ ಚರಣ್ ಅವರನ್ನು ಶಾಲು ಹಾಕಿ ಗೌರವಿಸಲಾಯಿತು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರು , ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಮಹೇಶ್ ಕುಲಾಲ್ ಸ್ವಾಗತಿಸಿ ಉಪಾಧ್ಯಕ್ಷ ಗಣೇಶ್ ಆರ್.ಧನ್ಯವಾದವಿತ್ತರು. ಅರವಿಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.

 

error: Content is protected !!