ಯೋಧ ಏಕನಾಥ ಶೆಟ್ಟಿ ಸ್ಮರಣಾರ್ಥ ಕುಟುಂಬಸ್ಥರಿಂದ ಗಿಡನಾಟಿ

 

 

 

ಬೆಳ್ತಂಗಡಿ: ಯೋಧ ಏಕನಾಥ ಶೆಟ್ಟಿ ಅವರ ನಾಪತ್ತೆ ಪ್ರಕರಣ ನಡೆದು ಜು.22ರಂದು 5 ವರ್ಷ ಪೂರ್ಣಗೊಂಡಿದ್ದು, ಅವರ ಸ್ಮರಣಾರ್ಥ ಕುಟುಂಬಸ್ಥರಿಂದ ಗುರುವಾಯನಕೆರೆ ಶಿಶುಮಂದಿರದ ವಠಾರದಲ್ಲಿ ಗಿಡನಾಟಿ ಕಾರ್ಯ ನಡೆಸಲಾಯಿತು. ‌
ಯೋಧ ಏಕನಾಥ ಶೆಟ್ಟಿಯವರ ಧರ್ಮಪತ್ನಿ ಜಯಂತಿ ಶೆಟ್ಟಿ, ಪುತ್ರ ಅಕ್ಷಯ್ ಗಿಡ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

2016ರ ಜುಲೈ 22ರಂದು‌ ಏಕನಾಥ ಶೆಟ್ಟಿಯವರು ಚೆನೈ ಯಿಂದ ಅಂಡಮಾನ್ ನ ಪೋರ್ಟ್ ಬ್ಲೇರ್ ಗೆ ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಾಪತ್ತೆಯಾಗಿತ್ತು‌. ಈ ವಿಮಾನದಲ್ಲಿ ಏಕನಾಥ ಶೆಟ್ಟಿಯವರು ಸೇರಿ ಒಟ್ಟು 29 ಯೋಧರು ಪ್ರಯಾಣಿಸುತ್ತಿದ್ದರು. ವಿಮಾನ ಪತ್ತೆಯಾಗದ ಹಿನ್ನೆಲೆಯಲ್ಲಿ ಸೈನ್ಯದಿಂದ ಸಕಲ ಸರಕಾರಿ ಗೌರವಗಳನ್ನು ಸಮರ್ಪಿಸಲಾಗಿತ್ತು.

 

 

ಗಿಡನಾಟಿ‌‌ ಸಂದರ್ಭ ಸಮಾಜ‌ ಸೇವಕ ಹಾಗೂ ಉದ್ಯಮಿ ಶಶಿರಾಜ್ ಶೆಟ್ಟಿ ಶಕ್ತಿನಗರ, ಪುಷ್ಪರಾಜ ಶೆಟ್ಟಿ,ಪ್ರದೀಪ್ ಶೆಟ್ಟಿ,ಶ್ರೀರಾಜ್ ಶೆಟ್ಟಿ, ಹಾಗೂ‌ ಸಾಯಿರಾಂ ಪ್ರೆಂಡ್ಸ್ ಗುರುವಾಯನಕೆರೆಯ ಸದಸ್ಯರು ಕುಟುಂಬದ ಆಪ್ತರು ಗಿಡನೆಡುವ ಕಾರ್ಯಕ್ಕೆ ಸಹಕರಿಸಿದರು. 100 ವಿವಿಧ ಜಾತಿಯ ಗಿಡಗಳನ್ನು ‌ಗುರುವಾಯನಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಟಿ‌ ಮಾಡಲಾಯಿತು. ‌

error: Content is protected !!