ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯುವ ಸಂಕಲ್ಪ ಜನತೆ ಮಾಡಬೇಕಿದೆ: ಶಾಸಕ ಹರೀಶ್ ಪೂಂಜ ಹೇಳಿಕೆ: ಲಾಯಿಲ ಸುಬ್ರಹ್ಮಣ್ಯ ಸಭಾ ಭವನದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಕಾರ್ಯಕಾರಿಣಿ ಸಭೆ

 

 

 

 

 

ಬೆಳ್ತಂಗಡಿ: ಚುನಾವಣೆಯಲ್ಲಿ ದೇಶದ ಜನರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಾರದು, ಬಿಜೆಪಿ ಸರ್ಕಾರ ಬಂದರೆ ಮಾತ್ರ ದೇಶ ಉಳಿಯಬಹುದು ಎಂಬ ನಿಶ್ಚಯ ಮಾಡಬೇಕು. ಗ್ರಾಮ ಮಟ್ಟದಿಂದ ಕೇಂದ್ರದವರೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಾಗ ಇವಿಎಂ ಮೆಷಿನ್ ಹಾಳಾಗಿದೆ, ಅಲ್ಲದೆ ಹ್ಯಾಕ್ ಮಾಡಿ ಬಿಜೆಪಿ ಪರವಾಗಿ ಮತ ಬೀಳುವಂತೆ ಮಾಡಿದ್ದಾರೆ ಎಂಬ ಸಂಶಯವನ್ನು ಹೊರಹಾಕಿ ಸುಳ್ಳು ಸುದ್ಧಿಗಳನ್ನು ಪ್ರಚಾರಮಾಡಿದರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಲಾಯಿಲ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ
ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.ಕೊರೊನಾ ಸಂದರ್ಭದಲ್ಲಿ ನಮ್ಮ ದೇಶದ ವಿಜ್ಞಾನಿಗಳು ಎರಡು ಲಸಿಕೆಗಳನ್ನು ತಯಾರಿಸಿ ಜನರಿಗೆ ನೀಡಲು ತಯಾರಿ ನಡೆಸಿದಾಗ ಅದರ ಬಗ್ಗೆ ಜನರಲ್ಲಿ ಇಲ್ಲ ಸಲ್ಲದ ಭಯ ಹುಟ್ಟಿಸಿ ಅಪಪ್ರಚಾರ ಮಾಡಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದರು. ಅದ್ದರಿಂದ ಸಮಾಜಮುಖಿ ಕೆಲಸಗಳನ್ನು ಸಂಶಯಸ್ಪದವಾಗಿ ಬಿಂಬಿಸಿ ಜನರ ದಾರಿ ತಪ್ಪಿಸುವ ಕೆಲಸಗಳನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಾಗಿದೆ ಎಂದರು.

 

 

 

ಭಾರತೀಯ ಜನತಾ ಪಾರ್ಟಿ ಸಂಘಟನಾತ್ಮಕವಾಗಿರುವ ಸಂಘಟನೆಯನ್ನು ಮಾಡಿಕೊಂಡು ಹೋಗುವಂತಹ ನಿಟ್ಟಿನಲ್ಲಿ ಕೊರೊನಾ 2ನೇ ಅಲೆಯಿಂದಾಗಿ ಅಡಚಣೆಯಾಯಿತು. ಈ ಮದ್ಯೆಯೂ ಜಿಲ್ಲಾ ಮಹಿಳಾ ಮೋರ್ಚಾದ ಪ್ರಥಮ ಜಿಲ್ಲಾ ಕಾರ್ಯಕಾರಿಣಿ ಸಭೆ ಬೆಳ್ತಂಗಡಿಯಲ್ಲಿ‌ ನಡೆಯತ್ತಿದೆ.
ಗ್ರಾಮಮಟ್ಟದ ಜನ ಪ್ರತಿನಿಧಿಗಳಿಂದ ದೇಶದ ಅರ್ಥ ಸಚಿವರ ವರೆಗೆ ಮಹಿಳಾ ಪ್ರತಿನಿಧಿಗಳಿಗೆ ಅವಕಾಶ ಕೊಟ್ಟಂತಹ ಪಕ್ಷ ಇದ್ದರೆ ಅದು ಬಿಜೆಪಿ. ಕೊರೊನಾ ಸಮಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಮಹಿಳಾ ಮೊರ್ಚಾದ ಸದಸ್ಯರು ಜನರಿಗೆ ದೈರ್ಯ ತುಂಬುವ ಕೆಲಸ ಮಾಡಿರುವುದು ಅಭಿನಂದನೀಯ ಎಂದರು.

 

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಭಾರತವನ್ನು ಇಡೀ ವಿಶ್ವವೇ ನಿಬ್ಬೆರರಾಗಿ ನೋಡುತ್ತಿದೆ. ಇದಕ್ಕೆ ಕಾರಣ ನಮ್ಮ ಪ್ರಧಾನಿ ನರೇಂದ್ರ ಮೋದಿ ಇದು ನಮಗೆ ಹೆಮ್ಮೆ. ಮಹಿಳೆಯರು ಮತ್ತು ಮಕ್ಕಳು ಸ್ವಾವಲಂಬಿಯಾಗಿ ಬದುಕಿ ಜೀವನವನ್ನು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ರಾಜಕೀಯವಾಗಿ ಬೆಳೆಯಬೇಕು ಎಂಬುವುದಕ್ಕೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಂಸತ್ತಿನಲ್ಲಿ ಇರುವಂತಹ ಮಹಿಳೆಯರೇ ಸ್ಫೂರ್ತಿದಾಯಕ ಹಾಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

 

 

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಮಹಿಳಾ ಮೊರ್ಚಾದ ಪ್ರಮುಖರಾದ ಶಿಲ್ಪ ಸುವರ್ಣ, ಪೂಜಾ ಪೈ, ಕಸ್ತೂರಿ ಪಂಜ, ಹಾಗೂ ವಿವಿಧ ಮೋರ್ಚಾಗಳ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

 

 

 

error: Content is protected !!