ತರಕಾರಿ ಅಂಗಡಿಗೆ ನುಗ್ಗಿದ ಕಾರು: ಇಬ್ಬರು ಅಪಘಾತದಿಂದ ಜಸ್ಟ್ ಮಿಸ್!: ನಿಲ್ಲಿಸಿದ್ದ ಕಾರು‌ ಚಾಲನೆಗೊಂಡು ನಡೆದ ಎಡವಟ್ಟು

 

ಉಜಿರೆ: ತರಕಾರಿ ಅಂಗಡಿ ಎದುರು ನಿಲ್ಲಿಸಿದ ಕಾರೊಂದು ಏಕಾಏಕಿ ಚಲಿಸಿ ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆ ಪೇಟೆಯಲ್ಲಿ ನಡೆದಿದೆ.

ಉಜಿರೆ ಕಾಲೇಜ್ ರಸ್ತೆಯಲ್ಲಿ ಇರುವ ತರಕಾರಿ ಅಂಗಡಿಯೊಂದರ ಎದುರು ವ್ಯಕ್ತಿಯೊಬ್ಬರು ಕಾರೊಂದನ್ನು ನಿಲ್ಲಿಸಿ ಹೊರಹೋಗಿದ್ದರು.

ಈ ಸಂದರ್ಭದಲ್ಲಿ ಕಾರು ಏಕಾಏಕಿ ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿದೆ. ಕಾರು ಬರುವುದನ್ನು ಗಮನಿಸಿ ಅಂಗಡಿಯಲ್ಲಿದ್ದವರು ತಕ್ಷಣ ತಪ್ಪಿಸಿಕೊಂಡ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

error: Content is protected !!