ಬೆಳ್ತಂಗಡಿಗೆ ₹240 ಕೋ. ವೆಚ್ಚದ ಬೃಹತ್ ನೀರಾವರಿ ಯೋಜನೆಗೆ ಅನುದಾನ ಘೋಷಣೆ: ಬಂದಾರು ಗ್ರಾ.ಪಂ. ವ್ಯಾಪ್ತಿಯ ಮೊಗ್ರು-ಮುಗೇರಡ್ಕದಲ್ಲಿ‌ ಸರ್ವ ಋತು ಸೇತುವೆ, ಏತ ನೀರಾವರಿ ಕಾಮಗಾರಿ: ಸ್ಥಳೀಯರಿಂದ ಮುಗೆರಡ್ಕ ದೈವಗಳಿಗೆ ಪ್ರಾರ್ಥನೆ ಸಲ್ಲಿಕೆ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಬೆಳ್ತಂಗಡಿ: ಕ್ಯಾಬಿನೆಟ್ ನಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು- ಮುಗೇರಡ್ಕದಲ್ಲಿ ನಿರ್ಮಾಣಗೊಳ್ಳಲಿರುವ ಸರ್ವ ಋತು ಸೇತುವೆ ಸಹಿತ ಏತ ನೀರಾವರಿ ಕಾಮಗಾರಿಗೆ ರೂ.240 ಕೋಟಿ ಅನುದಾನವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಘೋಷಣೆ ಮಾಡಿದ್ದಾರೆ.

ಬೃಹತ್ ನೀರಾವರಿ ಯೋಜನೆಯಲ್ಲಿ ತಾಲೂಕಿನ 10 ಗ್ರಾಮಗಳ ಕೃಷಿಗಾಗಿ ಏತ ನೀರಾವರಿ ಮೂಲಕ ನೀರು ಒದಗಿಸುವಂತಹ ಯೋಜನೆ ಇದಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲೂಕಿಗೆ ಮೊದಲು ಇದಾಗಿದೆ.

ಬಂದಾರು ಗ್ರಾಮಕ್ಕೆ ವಿಶೇಷ ಅನುದಾನ ತರಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಶ್ರಮಿಸಿದ ಶಾಸಕ ಹರೀಶ್ ಪೂಂಜ ಇವರಿಗೆ ಮುಗೆರಡ್ಕ ಪರಿಸರದ ನಿವಾಸಿಗಳು ತಮ್ಮ ಬಹು ವರುಷಗಳ ಬೇಡಿಕೆ ಈಡೇರುತ್ತಿರುವ ಸಂತೋಷದಲ್ಲಿ ಇತಿಹಾಸ ಪ್ರಸಿದ್ಧ ಮುಗೆರಡ್ಕ ದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಅಭಿನಂದನೆ ಸಲ್ಲಿಸಿದರು.

error: Content is protected !!