ಆನ್ ಲೈನ್ ತರಗತಿಗಾಗಿ ಕೋಣೆಯೊಳಗಿದ್ದ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!: ಆತ್ಮಹತ್ಯೆಗೆ ಕಾರಣ ನಿಗೂಢ

ಅಳದಂಗಡಿ: ಆನ್ ಲೈನ್ ತರಗತಿಗೆಂದು ಕುಳಿತಿದ್ದ ಪದವಿ ವಿದ್ಯಾರ್ಥಿಯೊಬ್ಬ, ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ರಾಡಿ ಗ್ರಾಮದಲ್ಲಿ ಜು.13ರಂದು ನಡೆದಿದೆ.

ಕೊಕ್ರಾಡಿ ಗ್ರಾಮದ ಆರೋದ್ದು ಮನೆ ರತ್ನಾಕರ ಎಂಬವರ ಪುತ್ರ ಉಜಿರೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ರಕ್ಷಿತ್ ಅನ್ ಲೈನ್ ತರಗತಿಗಾಗಿ ತನ್ನ ಮನೆಯ ಕೋಣೆಯಲ್ಲಿದ್ದು, ಮನೆಯವರೆಲ್ಲ ಮನೆಕೆಲಸದಲ್ಲಿ ತೊಡಗಿಕೊಂಡಿದ್ದರು. ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ತಾಯಿ ಹೋಗಿ ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದಾಗ, ಮೊಬೈಲ್ ಗೆ ಕಾಲ್ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಅಫ್ ಆಗಿದ್ದನ್ನು ಗಮನಿಸಿ, ತಕ್ಷಣ ಕಿಟಕಿಯ ಬಾಗಿಲನ್ನು ಒಡೆದು ನೋಡಿದಾಗ ನೇಣು ಬಿಗಿದುಕೊಂಡಿರುವುದು‌ ಗಮನಕ್ಕೆ ಬಂದಿದೆ. ಕೂಡಲೇ ಕುಣಿಕೆ ಬಿಡಿಸಿ, ನಾರಾವಿ ಆಸ್ಪತ್ರೆಗೆ ಕರೆದೋಯ್ಯಲಾಗಿದೆ, ಆದರೆ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವ ವಿಚಾರ ಧೃಡಪಡಿಸಿದ್ದಾರೆ.

ವಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!