ಅನುಮತಿಯೊಂದಿಗೆ‌ ಮರಳುಗಾರಿಕೆ ಅಕ್ರಮಕ್ಕೆ ಸಾರ್ವಜನಿಕರ ಆಕ್ರೋಶ: ಮೃತ್ಯುಂಜಯ ನದಿಯಲ್ಲಿ ಬೋಟ್ ಸಹಿತ ₹ 3.50 ಲಕ್ಷ ಮೌಲ್ಯದ ‌ಸ್ವತ್ತುಗಳು ವಶಕ್ಕೆ:ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ತಪಾಸಣೆ: ಬೆಳ್ತಂಗಡಿ ಕಂದಾಯ ಇಲಾಖೆ, ಧರ್ಮಸ್ಥಳ ಪೊಲೀಸ್ ಠಾಣೆ ಜಂಟಿ ಕಾರ್ಯಾಚರಣೆ

 

 

ಬೆಳ್ತಂಗಡಿ: ಮುಂಡಾಜೆ, ಕಾಪಿನಬಾಗಿಲು ಸಮೀಪ ಮೃತ್ಯುಂಜಯ ನದಿಯಲ್ಲಿ ಮರಳುಗಾರಿಕೆಗೆ ಡ್ರೆಜ್ಜಿಂಗ್ ಮಾಡಲು ಬಳಸಿದ ಬೋಟ್ ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದಾಗ ನದಿಯಲ್ಲಿ ಬೋಟ್ ಸಹಿತ ಡ್ರೆಜ್ಜಿಂಗ್ ಯಂತ್ರಗಳು ಪತ್ತೆಯಾಗಿತ್ತು, ತಕ್ಷಣ ಬೆಳ್ತಂಗಡಿ ಕಂದಾಯ ಇಲಾಖೆ ಸಹಿತ ಧರ್ಮಸ್ಥಳ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಬೋಟ್ ಸಹಿತ ಸೊತ್ತುಗಳ ಒಟ್ಟು ಮೌಲ್ಯ ಸೇರಿ ಅಂದಾಜು 3.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಈ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರ ಆಕ್ರೋಶ: 

ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ಪ್ರದೇಶದಲ್ಲಿ ನಿರಂತರ ಮರಳುಗಾರಿಕೆ ನಡೆಯುತ್ತಿದೆ. ಅನುಮತಿ ಪಡೆದು ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಚಾರ್ಮಾಡಿ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಲಾರಿಗಳು ಅಹರ್ನಿಶಿ ರಾಜಾರೋಷವಾಗಿ ತಿರುಗಾಟ ನಡೆಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!