ನಕ್ಸಲ್ ಪೀಡಿತವಾಗಿದ್ದ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಜಿ.ಪಂ. ಅನುಸೂಚಿತ ವರ್ಗ, ಪಂಗಡಗಳಿಗೆ‌ ಮೀಸಲಾತಿ ತಾಲೂಕಿಗೆ ಅಗತ್ಯ: ಪಂಚಾಯತ್ ರಾಜ್ ಅಧಿನಿಯಮದ ಕಲಂ 162(2)ರಂತೆ ಜಿಲ್ಲೆಯ 42 ಕ್ಷೇತ್ರಗಳ 21 ಜಿ.ಪಂ. ಅನುಸೂಚಿತ ವರ್ಗ, ಪಂಗಡಗಳಿಗೆ‌ ಮೀಸಲಾತಿ ನೀಡುವ ಅವಕಾಶವಿದೆ: ಸುದ್ದಿಗೋಷ್ಟಿಯಲ್ಲಿ ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದಿಂದ ‌ಹೇಳಿಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ 42 ಕ್ಷೇತ್ರಗಳಿರುತ್ತದೆ ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ. ಅದರೆ ಈ ಕ್ಷೇತ್ರಗಳ ಪೈಕಿ ಪ.ಜಾತಿ/ ಪಂಗಡಗಳಿಗೆಂದು ಕ್ಷೇತ್ರವನ್ನು ಅನುಸೂಚಿತ ವರ್ಗ ಮತ್ತು ಅನು ಸೂಚಿತ ಪಂಗಡಗಳಿಗೆ ಮೀಸಲಾಗಿರಿಸಿಲ್ಲ ಇದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ. ಎಂದು ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಹೇಳಿದರು.

ಅವರು ಪತ್ರಿಕಾ ಭವನದಲ್ಲಿ ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ‌1993ರ ಸೆಕ್ಷನ್ 162ರ ಪ್ರಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳನ್ನು ಆಯಾ ವರ್ಗದ ಜನ ಸಂಖ್ಯೆಯ ಅಧಾರದಲ್ಲಿ ನಿಗದಿಪಡಿಸಲಾಗುತ್ತದೆ.‌ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಈ ವರ್ಗಕ್ಕೆ ಸೇರಿದ ಜನಸಂಖ್ಯೆ ಅಧಿಕವಾಗಿದೆ.‌ ಭೌಗೋಳಿಕವಾಗಿ 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳು ಮೂಲ ಸೌಕರ್ಯಗಳಿಂದ ಇನ್ನೂ ಕೂಡಾ ವಂಚಿತವಾಗಿದೆ. ತಾಲೂಕಿನ ಹಲವು ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಮೂಲ ಸೌಕರ್ಯಗಳಿಂದ ಇನ್ನೂ ಕೂಡಾ ವಂಚಿತವಾಗಿದೆ. ತಾಲೂಕಿನ ಹಲವು ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ವರ್ಗದ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಒದಗಿಸಬೇಕಾಗಿತ್ತು. ಅದರೆ ಈಗಾಗಲೇ ಹೊರಡಿಸಲಾದ ಜಿ. ಪಂ ಮತ್ತು ತಾ.ಪಂ ಮೀಸಲಾತಿ ಯ ಕರಡು ಅಧಿಸೂಚನೆಯಲ್ಲಿ ದ. ಕ. ಜಿಲ್ಲೆಯ ಮಂಗಳೂರು ಕ್ಷೇತ್ರಕ್ಕೆ ಒಳಪಡುವ ತೆಂಕ ಎಡಪದವು, ಮೂಡು ಶೆಡ್ಡೆ, ಕೋಣಾಜೆ ಕ್ಷೇತ್ರಗಳಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಸಮುದಾಯದ ಕ್ಷೇತ್ರಗಳನ್ನು ಮೀಸಲು ಕ್ಷೇತ್ರ ಎಂದು ಪರಿಗಣಿಸಿರುವುದು ತೀರಾ ಬೇಸರದ ಸಂಗತಿ ಆ ಕ್ಷೇತ್ರಗಳಿಗೆ ಮೀಸಲಾದ ಮೀಸಲಾತಿಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಸಮುದಾಯದವರು ವಾಸವಿರುವ ಕ್ಷೇತ್ರಗಳನ್ನು ಪ. ಜಾತಿ ಮತ್ತು ಪಂಗಡದ ಮೀಸಲು ಕ್ಷೇತ್ರಗಳೆಂದು ತಿದ್ದು ಪಡಿ ಮಾಡಬೇಕಾಗಿ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸುವುದರೊಂದಿಗೆ ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ.ಈ ಹಿಂದಿನ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದಾಗ ಮತ್ತು 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಾಗಿ ಪುನರ್ ವಿಂಗಡಣೆಗೊಂಡಾಗಲೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನೂ ಮೀಸಲಾಗಿರಿಸಿಲ್ಲ .ಅದ್ದರಿಂದ ಮೇಲೆ ತಿಳಿಸಿದ ಕರಡು ಅಧಿನಿಯಮಕ್ಕೆ ನಾವು ಜಿಲ್ಲಾ ಚುನಾವಣಾ ಅಧಿಕಾರಿಗೆ ಮತ್ತು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಯವರಿಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ. ಬೆಳ್ತಂಗಡಿ ತಾಲೂಕಿನ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕನಿಷ್ಠ 2 ಸ್ಥಾನಗಳನ್ನು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಮೀಸಲಿರಿಸಬೇಕಾಗಿ ಒತ್ತಾಯಿಸುತಿದ್ದೇವೆ ಎಂದರು.

ಪಂಚಾಯತ್ ರಾಜ್ ಅಧಿನಿಯಮದ ಕಲಂ 162(2)ರ ಪ್ರಕಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇಕಡಾ 50ರಷ್ಟು ಮೀರದಂತೆ ಕ್ಷೇತ್ರಗಳನ್ನು ನಿಗದಿಪಡಿಸಬೇಕಾಗಿದ್ದು ಈ ಕರಡು ಅಧಿನಿಯಮದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 42 ಕ್ಷೇತ್ರಗಳಲ್ಲಿ 21 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಈ ವರ್ಗಗಳಿಗೆ ಮೀಸಲಿರಿಸಬಹುದು. ಅದರೆ ಈಗ 19 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಮೀಸಲಿರಿಸಿರುವುದರಿಂದ ಕನಿಷ್ಠ 2 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಅನುಸೂಚಿತ ಜಾತಿ, ಅನುಸೂಚಿತ ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಬಹುದಾಗಿದೆ. ಅದ್ದರಿಂದ ತಾಲೂಕಿನ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕನಿಷ್ಠ 2 ಸ್ಥಾನಗಳನ್ನು‌ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಮೀಸಲಿರಿಸಬೇಕಾಗಿ ಆಗ್ರಹಿಸುತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮು ಶಿಶಿಲ, ಬಿ.ಕೆ. ತಾರಾನಾಥ ಸದಸ್ಯರು ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ದ.ಕ ಜಿಲ್ಲೆ,ಯುವ ವೇದಿಕೆ ಮಾಜಿ ಅಧ್ಯಕ್ಷ ಎಮ್. ಎಲ್. ರವಿ, ನ.ಸ.ಸೇ.ಸಂಘದ ಮಾಜಿ ಕಾರ್ಯದರ್ಶಿ ಅನಂತು ಮುಂಡಾಜೆ ಉಪಸ್ಥಿತರಿದ್ದರು.

error: Content is protected !!