ಚಾಮರಾಜಪೇಟೆ ಪೊಲೀಸ್ ಠಾಣೆ ಪಿಎಸ್ಐರಿಂದ ಅತ್ಯಾಚಾರ ‌ಆರೋಪ‌ ಪ್ರಕರಣ:ಸಿಐಡಿ ತನಿಖೆಗೆ ಆದೇಶ.  ಪ್ರಕರಣದ ದಾಖಲೆ, ವಸ್ತುಗಳು ಸಿಐಡಿ ಕಛೇರಿಗೆ ಹಸ್ತಾಂತರ

ಬೆಳ್ತಂಗಡಿ: ಬೆಂಗಳೂರು ಚಾಮರಾಜಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ್ ಬಿರಾದರ್ ಪ್ರಕರಣವೊಂದರ ಸಂಬಂಧ ದೂರು ನೀಡಲು ಬಂದ ಯುವತಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಧರ್ಮಸ್ಥಳಕ್ಕೆ ಕರೆತಂದು ಲಾಡ್ಜ್ ನಲ್ಲಿ ಅತ್ಯಾಚಾರ ಮಾಡಿರುವುದಾಗಿ ಧರ್ಮಸ್ಥಳ ಠಾಣೆಗೆ ದಿನಾಂಕ 2020ರ ನವೆಂಬರ್ 11ರಂದು ಸಂತ್ರಸ್ತ ಯುವತಿ ದೂರು ನೀಡಿದ್ದು ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿ ಪಿಎಸ್ಐ ವಿಶ್ವನಾಥ್ ಬಿರಾದರ್ ನನ್ನು ಪೊಲೀಸರು ಬಂಧಿಸದೆ ಇದ್ದರೂ, ಕೆಲ ಸಮಯದ ನಂತರ ದಕ್ಷಿಣ ಕನ್ನಡ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಿಂದ ಜಾಮೀನು ಪಡೆದುಕೊಂಡಿದ್ದರು. ಆದರೆ ಪ್ರಕರಣದ ಆರೋಪಿ ಪಿಎಸ್ಐಯನ್ನು ಬಂಧಿಸದೆ ಧರ್ಮಸ್ಥಳ ಠಾಣೆಯ ಪಿಎಸ್ಐ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಮತ್ತು ಸಿಬ್ಬಂದಿಗಳು ಸಹಕರಿಸಿದ್ದರ, ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಜಾಮೀನು ರದ್ದು ಮಾಡಿ ಬಂಧಿಸಲು ವಕೀಲರ ಮೂಲಕ ಹೈಕೋರ್ಟ್ ಮೊರೆ ಹೋಗಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಪಿಎಸ್ಐ ವಿಶ್ವನಾಥ್ ಬಿರಾದರ್ ದಕ್ಷಿಣ ಕನ್ನಡ ಆರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ ಜಾಮೀನು ರದ್ದು ಮಾಡಿದ್ದು ಆರೋಪಿಯನ್ನು ತಕ್ಷಣ ಬಂಧಿಸಲು ಆದೇಶ ಮಾಡಿತ್ತು. ಮತ್ತು ಧರ್ಮಸ್ಥಳ ಪಿಎಸ್ಐ ಪವನ್ ಕುಮಾರ್ , ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅಗಿದ್ದ ಸಂದೇಶ್ ಮತ್ತು ಕೆಲ ಸಿಬ್ಬಂದಿಗಳ ವಿರುದ್ಧ ಮೂರು ತಿಂಗಳಲ್ಲಿ ದಕ್ಷಿಣ ಕನ್ನಡ ಎಸ್ಪಿ ತನಿಖೆ ಮಾಡಿ ವರದಿ ನೀಡಲು ಆದೇಶ ಮಾಡಿತ್ತು.

ಸಂತ್ರಸ್ತ ಯುವತಿ ಪ್ರಕರಣವನ್ನು ಸಿಐಡಿ ಮುಖಾಂತರ ತನಿಖೆ ಮಾಡಲು ಹೈಕೋರ್ಟ್ ಗೆ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಈದೀಗ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಆದೇಶ ಮಾಡಿದ್ದು ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣದ ಎಲ್ಲಾ ದಾಖಲೆ ಹಾಗೂ ವಸ್ತುಗಳನ್ನು (ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ. ಜಾಗ ತೆರವಾಗಿದ್ದು ಅದರ ಚಾರ್ಜ್ ನಲ್ಲಿದ್ದ) ಬಂಟ್ವಾಳ ಪಿ.ಎಸ್.ಐ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ತನಿಖಾ ಸಹಾಯಕರಾಗಿದ್ದ ಹೆಡ್ ಕ್ವಾನ್ಟೇಬಲ್ ಒಬ್ಬರು ಬೆಂಗಳೂರು ಸಿಐಡಿ ಕಛೇರಿಗೆ ತೆರಳಿ ಹಸ್ತಾಂತರ ಮಾಡಿದ್ದಾರೆ.

error: Content is protected !!