ಕೋವಿಡ್ ಸೋಂಕು ಕಡಿವಾಣಕ್ಕೆ ಲಸಿಕೆ ಪಡೆದುಕೊಳ್ಳುವ ಜಾಗೃತಿ ಮೂಡಿಸಿದ ಧರ್ಮಾಧಿಕಾರಿ ಡಾ.ಹೆಗ್ಗಡೆ: ಧರ್ಮಸ್ಥಳದಲ್ಲಿ ಲಸಿಕಾ ಅಭಿಯಾನ ಕೇಂದ್ರಕ್ಕೆ ಭೇಟಿ‌ ನೀಡಿ‌ ಸಾರ್ವಜನಿಕರಿಗೆ ಅರಿವು

ಧರ್ಮಸ್ಥಳ: ಅತೀ ಹೆಚ್ಚು ಜನಸಂಖ್ಯೆ ಇರುವ ಪಂಚಾಯಿತಿಗಳ ಜನರ ಬೇಡಿಕೆ ಹಾಗೂ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಲಸಿಕೆ ನೀಡಲಾಗುತ್ತಿದ್ದು, ತಾಲೂಕಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಧರ್ಮಸ್ಥಳ ಗ್ರಾ.ಪಂ.ನ ವತಿಯಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಸ್ಥರಿಗೆ ಕೋವಿಡ್-೧೯ ಲಸಿಕಾ ಅಭಿಯಾನ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ, ಲಸಿಕೆ ತೆಗೆದುಕೊಳ್ಳುವವರಿಗೆ ಧೈರ್ಯ ತುಂಬಿದರು.

 

ಮಹಾಮಾರಿ ಕೋವಿಡ್ ಸೋಂಕು ಕಡಿವಾಣಕ್ಕೆ ತಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಲಸಿಕೆ ಪಡೆದುಕೊಂಡರೆ ಅದರಿಂದಾಗುವ ಪ್ರಯೋಜನ ಹಾಗೂ ಮುಂಬರುವ ದಿನಗಳಲ್ಲಿ ಜನರು ಪಾಲಿಸಬೇಕಾದ ಕ್ರಮಗಳ ಕುರಿತು ಜನರಿಗೆ ತಿಳಿಸುವ ಜತೆಗೆ ಪ್ರತಿಯೊಬ್ಬರು ಯಾವುದೇ ಅಂಜಿಕೆ ಇಲ್ಲದೆ ಲಸಿಕೆ ಪಡೆದುಕೊಳ್ಳುವಂತೆ ಡಾ. ಹೆಗ್ಗಡೆಯವರು ಸಲಹೆ ನೀಡಿದರು.

 

ಈ ಸಂದರ್ಭ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಧರ್ಮಸ್ಥಳ ಪ್ರಾ. ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ. ಆಕಾಶ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯ ಮೋನಪ್ಪ ಗೌಡ, ಸದಸ್ಯರಾದ ಸುಧಾಕರ್ ಗೌಡ, ಹರ್ಷಿತ್ ಜೈನ್, ರವಿ ಕುಮಾರ್, ಮುರಳೀದಾಸ್, ಶರ್ಮಿಳ ಜೈನ್, ಲಕ್ಷ್ಮೀ ಚಿದಾನಂದ್, ಸುನೀತಾ, ಕಿಶೋರ್ ಭಂಡಾರಿ, ರೀನಾ, ದಿನೇಶ್ ರಾವ್, ಸುಧಾಕರ ನಡುಗುಡ್ಡೆ, ಧರ್ಮಸ್ಥಳ ಸಿ.ಎ ಬ್ಯಾಂಕಿನ ನಿರ್ದೇಶಕ ಪ್ರೀತಂ ಧರ್ಮಸ್ಥಳ ಮೊದಲಾದವರು ಇದ್ದರು.

error: Content is protected !!