ಧಾರ್ಮಿಕ ಕ್ಷೇತ್ರಗಳಲ್ಲಿ ದೇವರ ದರ್ಶನಕ್ಕೆ ಅವಕಾಶ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಜು.5ರಿಂದ ದರ್ಶನಕ್ಕೆ ವ್ಯವಸ್ಥೆ: ಸರಕಾರದ ಕೋವಿಡ್ ನಿಯಮಾವಳಿ ಅನುಸರಿಸುವುದು ಕಡ್ಡಾಯ

ಧರ್ಮಸ್ಥಳ: ಕೋವಿಡ್ 19 ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೆಲವೊಂದು ಮಾರ್ಗಸೂಚಿಯನ್ನು ಅಳವಡಿಸಿಕೊಂಡು ಅನ್ ಲಾಕ್ ಗೊಳಿಸಿದ್ದು, ಧಾರ್ಮಿಕ ಕ್ಷೇತ್ರಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ಕ್ಷೇತ್ರ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದೆಲ್ಲೆಡೆ ಜುಲೈ 5 ರಿಂದ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ದ.ಕ. ಜಿಲ್ಲಾಡಳಿತದ ಮಾರ್ಗಸೂಚಿಯನ್ವಯ ಸರಕಾರದ ಕೋವಿಡ್ ನಿಯಮಾವಳಿಯನ್ನು ಕ್ಷೇತ್ರಕ್ಕೆ ಭಕ್ತರು ಅನುಸರಿಸಬೇಕು. ಮಾಸ್ಕ್ ಕಡ್ಡಾಯ ಧರಿಸಬೇಕು, ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಈಗಾಗಲೇ ಕ್ಷೇತ್ರದಲ್ಲಿ ಸ್ಯಾನಿಟೈಸೇಷನ್ ಸಿಂಪಡಿಸಲಾಗಿದ್ದು, ಕ್ಷೇತ್ರದಿಂದ ಸೂಕ್ತ ಕ್ರಮಕೈಗೊಳ್ಳಲಾಗಿದೆ.

ಸರಕಾರದ ಎಲ್ಲಾ ಮಾರ್ಗಸೂಚಿಯನ್ನು ಕೇತ್ರ ಸಂದರ್ಶನ ಮಾಡುವ ಭಕ್ತರು ಪಾಲಿಸಬೇಕು ಎಂದು ಕ್ಷೇತ್ರದಿಂದ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

error: Content is protected !!