ಲಾಯಿಲ ಕನ್ನಾಜೆ ಬಡಾವಣೆ ಕಂಟೋನ್ಮೆಂಟ್ ವಲಯವಾಗಿ ಘೋಷಣೆ!:  ಒಟ್ಟು 38 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ!: ಪಾಸಿಟಿವ್ ಪ್ರಕರಣದ ಎಲ್ಲಾ ಮನೆಗಳಿಗೆ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿ ಹೊರ ಹೋಗದಂತೆ ಎಚ್ಚರಿಕೆ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಾರಿ ಸೋಂಕು ತಾಲೂಕಿನಲ್ಲಿ ನಿಯಂತ್ರಣದಲ್ಲಿ ಇದ್ದರೂ ಲಾಯಿಲ ಗ್ರಾಮದಲ್ಲಿ ಮಾತ್ರ ಸೋಂಕಿನ ಪ್ರಮಾಣ ಒಮ್ಮೆಲೆ ಉಲ್ಬಣಗೊಂಡಿದೆ. ಗ್ರಾಮದ ಎರಡನೇ ವಾರ್ಡಿನ ಕನ್ನಾಜೆ ಬಡಾವಣೆಯೊಂದರಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 38 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಸುಮಾರು 59ಕ್ಕಿಂತಲೂ ಅಧಿಕ ಮನೆಗಳಿರುವ ಈ ಬಡಾವಣೆಯಲ್ಲಿ ಕಳೆದ ಶುಕ್ರವಾರದವರೆಗೆ 29 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ಭಾಗದ ಸುಮಾರು 110 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು ಅದರೆ ಅದರಲ್ಲಿ ಕೇವಲ 9 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಸಮಾಧಾನಕರ ವಿಚಾರವಾಗಿದೆ.

ಈಗಾಗಲೇ ಇಲ್ಲಿ ಒಟ್ಟು 38 ಪಾಸಿಟಿವ್ ಪ್ರಕರಣ ಇದೆ. ತುಂಬಾ ಮನೆ ಇರುವ ಈ ಬಡಾವಣೆಯಲ್ಲಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅಧಿಕಾರಿಗಳು ಮನವೊಲಿಸಿದರೂ ಅಲ್ಲಿ ಹೋಗಲು ಒಪ್ಪದ ಕಾರಣ ನಿನ್ನೆ ಮತ್ತೆ ಪುನಃ ತಾಲೂಕು ಆರೋಗ್ಯಾಧಿಕಾರಿ, ಇಒ, ಭೇಟಿ ನೀಡಿ ಕೋವಿಡ್ ಕೇರ್ ಸೆಂಟರ್ ಗೆ ಹೋಗುವಂತೆ ಮನವಿ ಮಾಡಿದ್ದಾರೆ  ಎನ್ನಲಾಗಿದೆ.  ಅದರೆ ಯಾರೂ ಕೂಡ  ಹೋಗಲು ಒಪ್ಪದ ಕಾರಣ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಇಬ್ಬರನ್ನು ಸ್ಥಳಾಂತರಿಸಿ ಈ ಪ್ರದೇಶವನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದೆ.

ಪಾಸಿಟಿವ್ ಪ್ರಕರಣ ಇರುವ ಮನೆಗಳಿಗೆ ಮನೆಯ ಪ್ರತ್ಯೇಕತೆ ಸ್ಟಿಕ್ಕರ್ ಅಂಟಿಸಿ ಹೊರಗೆ ತೆರಳಬಾರದಾಗಿ ಎಚ್ಚರಿಕೆಯನ್ನು ಪಂಚಾಯತ್ ಮೂಲಕ ನೀಡಲಾಗಿದೆ ಎಂದು ತಿಳಿದು ಬಂದಿದೆ.ಸುಮಾರು 59 ಮನೆಗಳಿರುವ ಈ ಪ್ರದೇಶದಲ್ಲಿ 230ಕ್ಕಿಂತಲೂ ಅಧಿಕ ಜನಸಂಖ್ಯೆ ಇದೆ. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ಡಾನ, ಉಪಾಧ್ಯಕ್ಷ ಗಣೇಶ್. ಆರ್.ಕಾರ್ಯದರ್ಶಿ ಪುಟ್ಟ ಸ್ವಾಮಿ, ಲೆಕ್ಕ ಸಹಾಯಕಿ ರೇಶ್ಮಾ .ಮ. ಗಂಜಿಗಟ್ಟಿ, ಉಪಸ್ಥಿತರಿದ್ದರು.

110 ಜನರಲ್ಲಿ 9 ಪಾಸಿಟಿವ್

ಪಾಸಿಟಿವ್ ಪ್ರಕರಣ ಬಂದ್ದ ಹಿನ್ನೆಲೆಯಲ್ಲಿ ಆ ಪ್ರದೇಶದ ಸುಮಾರು 110 ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿತ್ತು ಇದರಲ್ಲಿ ಕೇವಲ 9 ಜನರ ವರದಿ ಮಾತ್ರ ಪಾಸಿಟಿವ್ ಬಂದಿದೆ. ಈ ಬಗ್ಗೆ ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಮೊದಲ ಬಾರಿ ಸೋಂಕು ಪ್ರಕರಣ ಪತ್ತೆಯಾದ ದಿನ ನಮ್ಮ ಪರಿಸರದ ಎಲ್ಲಾಜನರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದರಿಂದ ಮಾಸ್ಕ್ ಧರಿಸಿ ಓಡಾಡುವಂತೆ ಕಾಳಜಿ ತೋರಿಸಿದ್ದರಿಂದ ಇಷ್ಟೊಂದು ಕಡಿಮೆ ಪ್ರಕರಣ ಬರಲು ಕಾರಣವಾಯಿತು ಎಂದು ಸ್ಥಳೀಯರೊಬ್ಬರು ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

error: Content is protected !!