ಜುಲೈ 19, 22ರಂದು ಎಸ್.ಎಸ್. ಎಲ್.ಸಿ. ಪರೀಕ್ಷೆ: ಸುದ್ದಿಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ಮಾಹಿತಿ: ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷಾ ಸಮಯ: ಎಲ್ಲವೂ ಬಹುಆಯ್ಕೆ ಮಾದರಿ ಪ್ರಶ್ನೆಗಳು:

ಬೆಂಗಳೂರು: ಜುಲೈ 19 ಹಾಗೂ 22ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಎಸ್.ಎಸ್. ಎಲ್.ಸಿ. ಪರೀಕ್ಷೆಗೆ ಅವಧಿ ನಿಗದಿಪಡಿಸಲಾಗಿದೆ ಎಂದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿ‌ಯಲ್ಲಿ ಮಾಹಿತಿ ನೀಡಿ, ಈ ಬಾರಿಯ ಎಸ್​.ಎಸ್​.ಎಲ್​.ಸಿ. ಪರೀಕ್ಷೆ 2 ದಿನ ಮಾತ್ರ ನಡೆಯಲಿದೆ. ಎಲ್ಲಾ ಪ್ರಶ್ನೆಗಳು ಆಬ್ಜೆಕ್ಟಿವ್ (ಬಹು ಆಯ್ಕೆ)​ ಮಾದರಿಯಲ್ಲಿ ಇರಲಿದೆ. ಪರೀಕ್ಷೆಯ ಒಂದು ದಿನ ಭಾಷಾ ವಿಷಯಗಳು ಹಾಗೂ ಮತ್ತೊಂದು ದಿನ ಇತರ ವಿಷಯಗಳು ನಡೆಯಲಿವೆ. ಜುಲೈ 19ರಂದು ಸೋಮವಾರ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ. ಜುಲೈ 22ರಂದು ಗುರುವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!