ಆಶ್ರಮವಾಸಿಗಳು ಆರೋಗ್ಯದಿಂದ ಹಿಂದಿರುಗುತ್ತಿರುವ ಧನ್ಯತಾ ಭಾವ: ಮಾನವೀಯತೆಯ ಸೇವೆಯಲ್ಲಿ ಕೊಡುಗೆ ಸಲ್ಲಿಸಿದ‌ ಸಂತೃಪ್ತಿ: ಆರೋಗ್ಯ ಸೂತ್ರವನ್ನು ಪಾಲಿಸಿ ಸುರಕ್ಷಿತವಾಗಿರಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹಿತನುಡಿ

ಧರ್ಮಸ್ಥಳ: ಕೊರೊನಾ 3ನೇ ಅಲೆಯ ಬಗ್ಗೆ ಮಾತುಗಳು ಬರುತ್ತಿದೆ. ಇದು ಇನ್ನೂ ಆರಂಭ ಹಂತಕ್ಕೂ ಮುನ್ನಾ ಆಗಿರುವುದರಿಂದ, ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಪಾಲಿಸಬೇಕಾಗಿದೆ. ಮನೆಯಲ್ಲಿ ಸಾರ್ವಜನಿಕ ಓಡಾಟದ ಸ್ಥಳಗಳಲ್ಲಿ‌ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ. ನನ್ನ ಪ್ರಾರ್ಥನೆ ಇಷ್ಟೆ, ಈ 3ನೇ ಅಲೆ ತೀವ್ರವಾಗಬಾರದು. ಎಲ್ಲರಿಗೂ ಆರೋಗ್ಯ ದೊರಕಬೇಕು, ಅದರೂ ನಮ್ಮ ಮುನ್ನೆಚ್ಚರಿಕೆಯಿಂದ ಮತ್ತು ಎರಡು ವರ್ಷದ ಅನುಭವದಿಂದ ಈ 3ನೇ ಅಲೆಯನ್ನು ತಪ್ಪಿಸಿಕೊಳ್ಳಬಹುದು ಎಂಬ ವಿಶ್ವಾಸ ನನಗಿದೆ ಎಂದರು.

ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ತಾಲೂಕಿನ ಸಿಯೋನ್ ಅಶ್ರಮದಲ್ಲಿ ಬುದ್ಧಿಮಾಂದ್ಯರು, ವೃದ್ಧರು, ಅನಾಥರು ಹಾಗೂ ಅನಾರೋಗ್ಯದಲ್ಲಿರುವಂತವರ ಸೇವೆಯನ್ನು ಮಾಡುತಿರುವುದು ಮಾನವೀಯತೆಯ ಅತೀ ದೊಡ್ಡ ಫಲಿತಾಂಶವನ್ನು ಅಲ್ಲಿ ನೋಡಬಹುದು. ಕಳೆದ ಹಲವು ವರುಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಅಕ್ಕಿ, ತರಕಾರಿ ಹಾಗೂ ಇನ್ನಿತರ ರೀತಿಯಲ್ಲಿಯೂ ಸಹಾಯ ಹಸ್ತ ಚಾಚುವಂತಹ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಅದರೆ ಇತ್ತೀಚೆಗೆ ಕೊರೋನಾ ಸೋಂಕು ಸಿಯೋನ್ ಆಶ್ರಮದಲ್ಲಿ ಇರುವವರಿಗೆ ಹರಡಿ ಆತಂಕಕ್ಕೆ‌ ಕಾರಣವಾಗಿತ್ತು. ಈ ಸಂದರ್ಭದಲ್ಲಿ ತಾಲೂಕಿನ ಶಾಸಕರು ಮೊದಲು ಅಲ್ಲಿದ್ದ ಎಲ್ಲಾ ಕೊರೊನಾ ಸೋಂಕಿತರನ್ನು ಶಿಫ್ಟ್ ಮಾಡಿ ಅಲ್ಲಿದ್ದ ಇತರರಿಗೆ ಹರಡದಂತೆ ಮನ್ನೆಚ್ಚರಿಕೆ ವಹಿಸಬೇಕು ಎಂಬ ನಿಟ್ಟಿನಲ್ಲಿ ಹಾಗೂ ಅಲ್ಲಿ ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಗಳು ಇಲ್ಲದ್ದನ್ನು ಮನಗಂಡಿದ್ದರು. ಶಾಸಕರ ಮಾರ್ಗದರ್ಶನದಂತೆ ಧರ್ಮಸ್ಥಳದ ರಜತಾದ್ರಿ ವಸತಿ ಗೃಹವನ್ನು ಕೋವಿಡ್ ಕೇರ್ ಆಗಿ ಪರಿವರ್ತಿಸಿ ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಶ್ರಮದವರು ಹೇಳುವಂತೆ ಇಲ್ಲಿಗೆ ಬಂದ ಯಾರೂ ಕೂಡ ಯಾವುದೇ ಪ್ರಾಣಾಪಾಯದಿಂದ ಪಾರಾಗಿ ಆರೋಗ್ಯದಿಂದ ಗುಣಮುಖರಾಗಿ ಹಿಂದಿರುಗುತ್ತಿದ್ದಾರೆ ಎಂದು ಸಂತೋಷವನ್ನು ಹಂಚಿಕೊಂಡಾಗ ನಮಗೆ ಅದೇ ಧನ್ಯತೆ ಈ ಮಾನವೀಯತೆಯ ಸೇವೆಯಲ್ಲಿ ನಾವೊಂದು ಸಣ್ಣ ಕೊಡುಗೆಯನ್ನು ನೀಡಿದ್ದೇವೆ, ಕ್ಷೇತ್ರದಿಂದ ಕರ್ನಾಟಕದ ಪ್ರತಿಯೊಂದು ನಗರಗಳಲ್ಲಿ, ಗ್ರಾಮಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸೇವೆಗಳು ನಡೆಯುತ್ತಿದೆ. ನಮ್ಮಿಂದ ಸಾಧ್ಯವಾದಷ್ಟು ಸೇವೆಯನ್ನು ನಾವು ಮಾಡುತ್ತಿದ್ದೇವೆ. ಅದಲ್ಲದೆ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಶೀಘ್ರವಾಗಿ‌ ಎಲ್ಲ‌ ಸೋಂಕಿತರು ಗುಣ ಹೊಂದುತ್ತಿದ್ದು ಸೋಂಕು ಹರಡುತ್ತಿರುವುದು ಕಡಿಮೆಯಾಗುತ್ತಿದೆ. ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ಆತ್ಮವಿಶ್ವಾಸ ಎಲ್ಲರಲ್ಲೂ ಮೂಡಿದೆ. ಲಸಿಕೆ ತೆಗೆದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಆರೋಗ್ಯವಂತಾಗಿರಲು ಸಾಧ್ಯ ಎಂಬ ವಿಶ್ವಾಸ ಹುಟ್ಟಿದೆ. ಈ ವಿಶ್ವಾಸ ಎಲ್ಲ ಜನರು ಉಳಿಸಿಕೊಳ್ಳಬೇಕು ಎಂದು ನಾಡಿನ ಜನರಲ್ಲಿ ವಿನಂತಿ‌ ಮಾಡುತಿದ್ದೇನೆ. ಯಾರೂ ಭಯ ಪಡಬೇಡಿ, ಆಲಸ್ಯ ಮಾಡಬೇಡಿ. ಮಾಡಿದರೆ ಏನಾಗುತ್ತದೆ ಎಂಬುವುದಕ್ಕೆ ಉತ್ತರ ಇಲ್ಲ, ಒಂದು ವೇಳೆ ಏನಾದರೂ ಅದರೆ ಹಿಂದೆ ಬರುವಂತದ್ದು ಬಹಳ ಕಷ್ಟ ಅದ್ದರಿಂದ ಎಲ್ಲರೂ ಆರೋಗ್ಯದ ಸೂತ್ರಗಳನ್ನು‌ ಪಾಲಿಸಬೇಕು ಎಂದು ಧರ್ಮಾಧಿಕಾರಿಗಳು ನುಡಿದರು.

error: Content is protected !!