ಆ್ಯಂಬ್ಯುಲೆನ್ಸ್ ನಲ್ಲೇ ಹೆರಿಗೆ: ಸಮಯಪ್ರಜ್ಞೆ ಮೆರೆದ ಚಾಲಕ, ಶುಶ್ರೂಶಕಿ: ತಪ್ಪಿದ ಸಂಭಾವ್ಯ ಅಪಾಯ: ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಘಟನೆ

ಬೆಳ್ತಂಗಡಿ: ಗರ್ಭಿಣಿ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕೊಂಡೊಯ್ಯುವ ದಾರಿ ಮಧ್ಯೆ ಹೆರಿಗೆಯಾದ ಘಟನೆ ನಡೆದಿದೆ.

ತಾಲೂಕು ಸರಕಾರಿ ಆಸ್ಪತ್ರೆಯಿಂದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶಿರ್ಲಾಲು ಸಮೀಪದ ಮಜಲಡ್ಡ ನಿವಾಸಿ ಲಲಿತ (38)ಎಂಬ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಕ್ಕಡದ 108 ಅಂಬುಲೆನ್ಸ್ ನಲ್ಲಿ ಕರೆದೊಯ್ಯುವ ವೇಳೆ ಮಡಂತ್ಯಾರು ಸಮೀಪಿಸುತ್ತಿದ್ದಂತೆ ಮಹಿಳೆಗೆ ವಿಪರೀತ ನೋವು ಉಲ್ಬಣಗೊಂಡಾಗ ತಕ್ಷಣ ಕಾರ್ಯ ಪ್ರವರ್ತರಾದ ಶುಶ್ರೂಷಕಿ ವಿಲ್ಮಾ ಹಾಗೂ ಅಂಬುಲೆನ್ಸ್ ಚಾಲಕ ಗಿರೀಶ್ ರವರ ಸಹಾಯದಿಂದ ಅಂಬುಲೆನ್ಸ್ ನ ಒಳಗೆ ಹೆರಿಗೆ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಚಾಲಕ ಗಿರೀಶ್ ರವರ ಹಾಗೂ ಶುಶ್ರೂಷಕಿಯ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿ ಬೆಳ್ತಂಗಡಿ ತಾಲೂಕು ಆಸ್ಪತ್ರೆ ದಾಖಲಿಸಿದ್ದಾರೆ.

error: Content is protected !!