ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ‌ಬಂತು ಮರಿ ಹೆಬ್ಬಾವು!: ಕಪಾಟಿನಲ್ಲಿ‌ ಹಾವು‌ ಕಂಡು‌‌ ಸಿಬ್ಬಂದಿ ಸುಸ್ತೊ‌ ಸುಸ್ತು!: ಹಾವು ರಕ್ಷಿಸಿದ ಸ್ನೇಕ್ ಅಶೋಕ್

 

ಬೆಳ್ತಂಗಡಿ: ತಾಲೂಕು ಸರಕಾರಿ ಆಸ್ಪತ್ರೆಯ ಕ್ಯಾಶ್ವಾಲಿಟಿ ಯಲ್ಲಿ ಕಪಾಟಿನೊಳಗೆ ಹೆಬ್ಬಾವು ಕಂಡಿದ್ದು ಆಸ್ಪತ್ರೆ ‌ಸಿಬ್ಬಂದಿ‌ ಬೆಚ್ಚಿ ಬಿದ್ದಿದ್ದಾರೆ.

ಆಸ್ಪತ್ರೆಯಲ್ಲಿ ‌ಬೆಳಗ್ಗೆ 11 ಗಂಟೆ ಸುಮಾರಿಗೆ ಹಾವು ಕಂಡುಬಂದಿದ್ದು ಆಸ್ಪತ್ರೆ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ. ಹಾವು ಯಾವುದೆಂದು ತಿಳಿಯದ ಪರಿಣಾಮ ಕೂಡಲೇ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಲಾಗಿದೆ. ಅಶೋಕ್ ಅವರು ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿದಾಗ ಹೆಬ್ಬಾವಿನ ಮರಿ ಎಂಬುದು ಖಚಿತವಾಗಿದ್ದು, ಹಾವನ್ನು ರಕ್ಷಿಸಿದ್ದಾರೆ.

 

ಉರಗ ಪ್ರೇಮಿ ಸ್ನೇಕ್ ಅಶೋಕ್ ಅವರು ತಿಳಿಸುವಂತೆ, “ಮಳೆಗಾಲದಲ್ಲಿ‌ ಹೆಬ್ಬಾವಿನ ಮೊಟ್ಟೆಗಳು ಒಡೆದು ಮರಿಯಾಗುವ ಕಾಲವಾಗಿದ್ದು, ರಕ್ಷಣೆಗಾಗಿ ಹಾಗೂ ಬೆಚ್ಚಗಿನ ಸುರಕ್ಷಿತ ಸ್ಥಳ ಅರಸಿಕೊಂಡು ಹೆಬ್ಬಾವಿನ ಮರಿ ಆಸ್ಪತ್ರೆಗೆ ಆಗಮಿಸಿರಬಹುದು. ಸಮೀಪದಲ್ಲೇ ಎಲ್ಲೋ ಹೆಬ್ಬಾವು ಮೊಟ್ಟೆ ಇಟ್ಟಿದ್ದು, ಈಗ ಮರಿಗಳು ಹೊರಬಂದಿರುವ ಸಾಧ್ಯತೆಯೂ ಇದೆ. ಆದ್ದರಿಂದ ಸ್ಥಳೀಯ ಪರಿಸರದಲ್ಲಿ‌ ಇನ್ನಷ್ಟು ಹೆಬ್ಬಾವಿನ ಮರಿಗಳು ಪತ್ತೆಯಾದರೂ ಅಚ್ಚರಿ ಪಡಬೇಕಿಲ್ಲ” ಎಂದು ‘ಪ್ರಜಾಪ್ರಕಾಶ ನ್ಯೂಸ್’ಗೆ ಮಾಹಿತಿ ನೀಡಿದ್ದಾರೆ.

error: Content is protected !!