ಲಾಕ್ ಡೌನ್ ಎಫೆಕ್ಟ್ ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರನ್ನೆ ಗುಜರಿಗೆ ಮಾರಿದ ಖದೀಮರು

ಬೆಂಗಳೂರು: ಲಾಕ್​​​​ಡೌನ್​ ಸಮಯದಲ್ಲಿ ಕಾಮಗಾರಿ ಇಲ್ಲದೆ ರಸ್ತೆ ಬದಿ ನಿಂತಿದ್ದ ರೋಡ್​ ರೋಲರ್​​​​ ನ್ನು ಖದೀಮರು ಕಳಚಿ ಬಿಡಿ ಬಿಡಿಯನ್ನಾಗಿಸಿ ಗುಜುರಿಗೆ ಮಾರಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರ್ ಮೂರು ತುಂಡುಗಳಾಗಿ ಬೇರ್ಪಡಿಸಿದ ದುಷ್ಕರ್ಮಿಗಳು ಪ್ರತಿ ಕೆ.ಜಿಗೆ 28 ​​ರೂನಂತೆ ಮಾರಾಟ ಮಾಡಿದ್ದಾರೆ. ಚಂದ್ರಾ ಲೇಔಟ್ ಬಳಿ ನಿಲ್ಲಿಸಿದ್ದ ರೋಡ್ ರೋಲರ್ ನ್ನು ಬೈದರಹಳ್ಳಿಯ ಸಮೀಪದ ಸೀಗೆಹಳ್ಳಿಗೆ ಕದ್ದೊಯ್ದಿದ್ದರು. ಗ್ಯಾಸ್ ಕಟ್ಟರ್ ಮತ್ತು ಯಂತ್ರಗಳನ್ನು ಬಳಸಿ, ರೋಡ್ ರೋಲರ್ ಮೂರು ತುಂಡುಗಳಾಗಿ ಕತ್ತರಿಸಿದ್ದಾರೆ. ಗುಜುರಿ ವ್ಯಾಪಾರಿಯೊಬ್ಬರು ಪ್ರತಿ ಕೆ.ಜಿಗೆ 28 ​​ರೂ.ಗೆ ಖರೀದಿಸಲು ಒಪ್ಪಿದ್ದಾರೆ.

ರೋಡ್ ರೋಲರ್ ಮಾಲೀಕ ವಿ ಸೆಲ್ವರಾಜ್ 12 ವರ್ಷಗಳ ಹಿಂದೆ ತಮಿಳುನಾಡು ಮೂಲದ ವ್ಯಕ್ತಿಯಿಂದ 2 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ರೋಲರ್‌ ಬಳಕೆಯಲ್ಲಿರಲಿಲ್ಲ ಮತ್ತು ಸೆಲ್ವರಾಜ್ ರೋಲರ್ ನಾಗರಾಭಾವಿಯ ರಸ್ತೆ ಸಮೀಪದ ಮೈದಾನದಲ್ಲಿ ನಿಲ್ಲಿಸಿದ್ದರು. ಬಳಿಕ ಸೆಲ್ವರಾಜ್ ಮೇ 25 ರಂದು ತಮಿಳುನಾಡಿಗೆ ತೆರಳಿದ್ದರು. ಜೂನ್ 19 ರಂದು ಹಿಂದಿರುಗಿ ನೋಡಿದಾಗ ರೋಲರ್ ಸ್ಥಳದಿಂದ ಕಾಣೆಯಾಗಿತ್ತು. ಹೀಗಾಗಿ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

ಮಾಲೀಕರು ನೀಡಿದ ದೂರಿನನ್ವಯ ಪೊಲೀಸ್ ಹಿರಿಯ ಅಧಿಕಾರಿಗಳು ರೋಡ್ ರೋಲರ್ ಪತ್ತೆಗಾಗಿ ಚಂದ್ರ ಲೇಔಟ್ ಇನ್ಸ್‌ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ತಂಡವನ್ನು ಸಜ್ಜುಗೊಳಿಸಲಾಗಿತ್ತು. ರೋಲರ್ ಅನ್ನು ಟ್ರಕ್​​​​ನಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದಾಗ ನಾಗರಭಾವಿ ನಿವಾಸಿ ಎನ್ ವಿನಯ್ ಪ್ರಮುಖ ಆರೋಪಿ ಎಂಬುದು ತಿಳಿದು ಬಂದಿದೆ. ಬಂಧಿತ ಆರೋಪಿ ಪವನ್​ ಜೊತೆಗೆ ಕಾಮಾಕ್ಷಿಪಾಳ್ಯದ ನಿವಾಸಿ ವಿನಯ್​​ ಕಾರು ಚಾಲಕ ಪವನ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದು, ಈತ ರೋಡ್​​​ ರೋಲರ್ ​​ಅನ್ನು ಸೀಗೆಹಳ್ಳಿಗೆ ಕೊಂಡೊಯ್ಯುವಾಗ ಆ ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ. ನಾವು ವಾಹನ ಕಳ್ಳತನದ ಆರೋಪದ ಮೇಲೆ ಪವನ್ ಎಂಬಾತನ ಬಂಧಿಸಿದ್ದೇವೆ. ಗುಜುರಿ ವ್ಯಾಪಾರಿ ಇಸ್ಮಾಯಿಲ್ ಎಂದು ಗುರುತಿಸಿ ಪ್ರತಿ ಕೆ.ಜಿ.ಗೆ 28 ​​ರೂ.ಗೆ ಮಾರಾಟ ಮಾಡಲು ವಿನಯ್ ಒಪ್ಪಿಕೊಂಡಿದ್ದನು ಎಂದು ಪವನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾನೆ. ರೋಡ್ ರೋಲರ್ 7,800 ಕಿ.ಗ್ರಾಂ ತೂಗುತ್ತದೆ. ಪ್ರಕರಣದಲ್ಲಿ ವಿನಯ್ ಮತ್ತು ಇಸ್ಮಾಯಿಲ್ ಹುಡುಕಾಟ ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!