ಬೆಳ್ತಂಗಡಿ: ತಂದೆ ಮಗನ ಮಧ್ಯೆನಡೆದ ಜಗಳದ ಕೊನೆಯಲ್ಲಿ ತಂದೆಯೇ ತನ್ನ ಪುತ್ರನನ್ನು ಕೊಲೆಗೈದು ಆತ್ಹಹತ್ಯೆಗೆ ಶರಣಾದ ಘಟನೆ ಪುಂಜಾಲಕಟ್ಟೆ ಭಜನಾ ಮಂದಿರದ ಬಳಿಯ ದೈಕಿನ ಕಟ್ಟೆ ಎಂಬಲ್ಲಿ ಬುಧವಾರ ನಡೆದಿದೆ.
ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿಯ ನಿವಾಸಿ ಬಾಬು ನಾಯ್ಕ ( 58) ಎಂಬವರು ತನ್ನ ಮಗ ಸಾತ್ವಿಕ್( 17) ಎಂಬಾತನನ್ನು ಕೊಲೆ ಮಾಡಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಾಬು ನಾಯ್ಕ್ ಅವರ ಪತ್ನಿ ಕ್ಯಾಶ್ಯೂ ಪ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ತಂದೆ ಮಗನಿಗೆ ಗಲಾಟೆ ನಡೆದು ಮಗ ಸಾತ್ವಿಕ್ ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ . ಕೊಲೆ ಮಾಡಿದ ಬಳಿಕ ಆತನು ಅಲ್ಲೇ ಮನೆಯ ಪಕ್ಕಾಸಿಗೆ ಹಗ್ಗ ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಡಿತದ ಚಟ ಹೊಂದಿದ್ದ ಬಾಬು ನಾಯ್ಕ್ ಅವರು ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.