ಬೆಳ್ತಂಗಡಿ: ಸೋಮವಾರ ಬೆಳ್ತಂಗಡಿಯಲ್ಲಿ ಮೆಗಾ ಅಭಿಯಾನ ಮೂಲಕ ಆದ್ಯತೆಯ ಲಸಿಕೆ ನೀಡುವ ಕಾರ್ಯ ಆರೋಗ್ಯ ಇಲಾಖೆಯಿಂದ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳ್ತಂಗಡಿ ತಾಲೂಕಿಗೆ 3,500 ಡೋಸ್ ಲಸಿಕೆ ಬಂದಿದ್ದು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆದ್ಯತೆ ನೆಲೆಯಲ್ಲಿ ಮೆಗಾ ಲಸಿಕೆ ಅಭಿಯಾನ ಆರಂಭವಾಗಿದೆ.
ಕಣಿಯೂರು ಪ್ರಾ. ಆರೋಗ್ಯ ಕೇಂದ್ರಕ್ಕೆ 700 ಡೋಸ್, ಉಜಿರೆ ಪ್ರ. ಆರೋಗ್ಯ ಕೇಂದ್ರಕ್ಕೆ 500 ಡೋಸ್, ಬೆಳ್ತಂಗಡಿ ಪ್ರಾ. ಆರೋಗ್ಯ ಕೇಂದ್ರಕ್ಕೆ 450 ಡೋಸ್, ಇಂದಬೆಟ್ಟು, ಮುಂಡಾಜೆ, ನೆರಿಯಾ, ಧರ್ಮಸ್ಥಳ, ಹತ್ಯಡ್ಕ, ಕೊಕ್ಕಡ, ಪಡಂಗಡಿ, ಅಳದಂಗಡಿ, ನಾರಾವಿ ಪ್ರಾ. ಆರೋಗ್ಯ ಕೇಂದ್ರಗಳಿಗೆ ಸರಾಸರಿ 250 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ.
ಸೋಮವಾರ ಫ್ರಂಟ್ ಲೈನ್ ವಾರಿಯರ್ಸ್‌ಗಳಾದ ಪೊಲೀಸ್ ಇಲಾಖೆ, ವೈದ್ಯರು, ದಾದಿಯರು, ಕಟ್ಟಡ ಕಾರ್ಮಿಕರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು, ಗ್ರಾ.ಪಂ. ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರಿಗೆ ಲಸಿಕೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೂ ಕೂಡಾ ಲಸಿಕೆ ನೀಡಲಾಗಿದೆ.