ಸೀಲ್ ಡೌನ್ ಪ್ರದೇಶದ ಸಾರ್ವಜನಿಕರಿಗೆ ಕೋವಿಡ್ -19 ಆರೋಗ್ಯ ತಪಾಸಣಾ ವಿಶೇಷ ಶಿಬಿರ: ಕೊರೋನಾ ಪರೀಕ್ಷೆ ಮೂಲಕ ಚಾಲನೆ

ಬೆಳ್ತಂಗಡಿ: ಉಜಿರೆ ಸೀಲ್‌ಡೌನ್ ಆಗಿರುವ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ -19 ವಿಶೇಷ ತಪಾಸಣಾ ಶಿಬಿರ ಜೂ.18 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಿತು.

ಹಿರಿಯರಾದ ವಸಂತಿ ಗೌಡ, ಜಯರಾಮ ಪಡ್ಡಿಲ್ಲಾಯ ಅವರಿಗೆ ಕೋವಿಡ್ ಪರೀಕ್ಷೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಭಿನ್ನವಾಗಿ ಚಾಲನೆ ನೀಡಲಾಯಿತು.

 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷತಾ ರಾಜ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಬದುಕು ಕಟ್ಟೋಣ ತಂಡದ ಸಂಚಾಲಕರಾದ ಕೆ. ಮೋಹನ್ ಕುಮಾರ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ.ಆರ್.ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಪಂಚಾಯತ್ ಸದಸ್ಯರು, ಉಜಿರೆ ವರ್ತಕರ ಸಂಘದ ಪದಾಧಿಕಾರಿಗಳು, ರೋಟರಿ ಕ್ಲಬ್, ಬದುಕು ಕಟ್ಟೋಣ ತಂಡದ ಸದಸ್ಯರು, ಆರೋಗ್ಯ ಸಹಾಯಕಿ ಸುಜಾತ, ಸಿಬ್ಬಂದಿ ವರ್ಗ, ವೈದ್ಯಾಧಿಕಾರಿಗಳ ತಂಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಜಯಂತ್ ಯು. ಬಿ, ಸಿಬ್ಬಂದಿ ವರ್ಗ ಮತ್ತು ಆಶಾಕಾರ್ಯಕರ್ತೆಯರು ಹಾಜರಿದ್ದರು.

error: Content is protected !!