ಬೈಕ್ ಸ್ಕಿಡ್ ಆಗಿ ಅಪಘಾತ:  ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪರಿಸ್ಥಿತಿ ಗಂಭೀರ: ಬೆಂಗಳೂರು ಜೆ.ಪಿ. ನಗರ 7th ಫೇಸ್ ಬಳಿ ಘಟನೆ: ತಡವಾಗಿ ‌ಬೆಳಕಿಗೆ ಬಂದ ಪ್ರಕರಣ

 

ಬೆಂಗಳೂರು: ‘ನಾನು ಅವನಲ್ಲ ಅವಳು’, ‘ಹರಿವು’ ಚಿತ್ರಗಳ‌ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಶನಿವಾರ ರಾತ್ರಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ವಿಜಯ್ ದಾಖಲಾಗಿದ್ದು, ಐಸಿಯು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಚಾರಿ ವಿಜಯ್ ಅವರು ಶನಿವಾರ ರಾತ್ರಿ ತನ್ನ ಗೆಳೆಯನ ಮನೆಗೆ ಊಟಕ್ಕೆ ತೆರಳಿದ್ದು, ಊಟ ಮುಗಿಸಿ ಗೆಳೆಯ ನವಿನ್ ಜೊತೆಗೆ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ವಿಜಯ್ ಅವರು ಬೈಕ್ ನ ಹಿಂಬದಿ ಸವಾರರಾಗಿದ್ದು, ಜೆ.ಪಿ. ನಗರದ 7th ಫೇಸ್ ಬಳಿ ಬೈಕ್ ಸ್ಕಿಡ್ ಆಗಿದೆ. ಅಪಘಾತದ ತೀವ್ರತೆಗೆ ಬೈಕ್ ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯ್ ಅವರ ತಲೆ ಹಾಗೂ ತೊಡೆಗೆ ಗಂಭೀರ ರೀತಿಯ ಏಟು ಬಿದ್ದಿದ್ದು, ರಾತ್ರಿಯೇ ಸರ್ಜರಿ ಮಾಡಲಾಗಿದೆ ಎಂಬ ಮಾಹಿತಿಗಳಿವೆ. ವಿಜಯ್ ಅವರ ಮೆದುಳಿನ ಬಲಭಾಗ ಹಾಗೂ ಬಲ ತೊಡೆಗೆ ತೀವ್ರವಾಗಿ ಏಟು ಬಿದ್ದಿದೆ ಎನ್ನಲಾಗುತ್ತಿದೆ.

ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿತ್ತು. ವಿಜಯ್ ಈ ಹಿಂದೆ ನಾತಿಚರಾಮಿ, ಕಿಲ್ಲಿಂಗ್ ವೀರಪ್ಪನ್, ಕೃಷ್ಟ ತುಳಸಿ, ರಿಕ್ತ, 6ನೇ ಮೈಲಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಫಿರಂಗಿಪುರ ಮೊದಲಾದ ಸಿನಿಮಾಗಳಲ್ಲಿ ‌ನಟಿಸಿದ್ದಾರೆ.

ವಿಜಯ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ನಟ ನಿನಾಸಂ ಸತೀಶ್ ‌ಭೇಟಿ ನೀಡಿದ್ದಾರೆ.

error: Content is protected !!