ದ್ವಿ-ಚಕ್ರ ವಾಹನದಲ್ಲಿ ಮದ್ಯ ಅಕ್ರಮ ‌ಮಾರಾಟ: ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಆರೋಪಿ ಪರಾರಿ: 15 ಲೀ. ಮದ್ಯ, ಬೈಕ್ ವಶಕ್ಕೆ

ಬೆಳ್ತಂಗಡಿ: ಪಿಲ್ಯ ಗ್ರಾಮದಲ್ಲಿ‌ ಗುರುವಾರ(ಜೂ.10) ಸಂಜೆ ದ್ವಿಚಕ್ರ ವಾಹನದಲ್ಲಿ‌ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದು, ಆರೋಪಿ ಪರಾರಿಯಾಗಿದ್ದು, 15.3 ಲೀ. ಮದ್ಯ ಹಾಗೂ ಮದ್ಯ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್. ದಾಳಿ‌ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ.

ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಂಟ್ವಾಳ ಬಿಂದು ಪಿ. ಅವರ ನಿರ್ದೇಶನದ ಮೇರೆಗೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಶೋಭಾ.ಕೆ ಮಾರ್ಗದರ್ಶನದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ತಂಡದಲ್ಲಿ ಬೆಳ್ತಂಗಡಿ ವಲಯ ಕಚೇರಿಯ ಅಬಕಾರಿ ಮುಖ್ಯ ಪೇದೆ ಸಯ್ಯದ್ ಶಬೀರ್, ಅಬಕಾರಿ ಪೇದೆ ಭೋಜ.ಕೆ, ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪಿ. ಇದ್ದರು.

error: Content is protected !!