ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹ 1ಲಕ್ಷ ಮೌಲ್ಯದ ವೈದ್ಯಕೀಯ ವಸ್ತುಗಳ ಹಸ್ತಾಂತರ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗ

ಬೆಳ್ತಂಗಡಿ: ಸದಾ ಸೇವೆಯನ್ನು ನೀಡುತ್ತಾ ಬರುತ್ತಿರುವ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಇಂದು ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.ಒಂದು ಲಕ್ಷ ಮೌಲ್ಯದ ಪಿಪಿಇ ಕಿಟ್, ಮಾಸ್ಕ್, ಮಾತ್ರೆ ,ಹ್ಯಾಂಡ್ ವಾಷ್ ಮತ್ತು ಸಾನಿಟೈಸರ್ ಮುಂತಾದ ಅಗತ್ಯ ವೈದ್ಯಕೀಯ ವಸ್ತುಗಳನ್ನು ಉಜಿರೆ ವೈದ್ಯಾಧಿಕಾರಿಗಳ ಮೂಲಕ ಹಸ್ತಾಂತರ ಮಾಡಲಾಯಿತು.

ಉಜಿರೆ ಆರೋಗ್ಯಧಿಕಾರಿ ಡಾ.ಅರ್ಚನಾ ಪ್ರಭು ಮತ್ತು ಆಸ್ಪತ್ರೆಯ 10 ಜನ ಸಿಬ್ಬಂದಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು, ಉಜಿರೆ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಉಜಿರೆ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಚನಾ ಪ್ರಭು, ಉಜಿರೆಯ ಜ್ಯೊತಿಷಿ ಯತೀಶ್ ಪೊದುವಾಳ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ಅವರ ಪತ್ನಿ ಅರ್ಚನಾ ಪೈ, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ್ ರಾವ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್.ಕೆ.ವಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಮ್.ಶಶಿಧರ್ ಕಲ್ಮಂಜ , ಉಜಿರೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ‌ ಸೋಮನಾಥ್, ಉಜಿರೆ ಆರೋಗ್ಯ ನಿರೀಕ್ಷಣಾಧಿಕಾರಿ ಸ್ವತಂತ್ರ ರಾವ್ ಇತರರು ಭಾಗಿಯಾಗಿದ್ದರು.

error: Content is protected !!