ಸಂಕಷ್ಟ ಕಾಲದಲ್ಲಿ ಸಮಯೋಚಿತ ನೆರವು: ಶಾಸಕ ಹರೀಶ್ ಪೂಂಜ: ಸರಕಾರದ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದ ಶಾಸಕ

ಬೆಳ್ತಂಗಡಿ: ಮಹಾಮಾರಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸೆಮಿ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಾವು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ ಮನವಿಗೆ ಪೂರಕವಾಗಿ ಕರ್ನಾಟಕ ಸರಕಾರ ಸ್ಪಂದಿಸಿದೆ. ಸಂಕಷ್ಟ ಕಾಲದಲ್ಲಿ ರೈತಾಪಿ ವರ್ಗದ ನೆರವಿಗೆ ಕಾರಣೀಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಿಗೆ ಮನದಾಳದ ಕೃತಜ್ಞತೆಗಳು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಭೂ ಅಭಿವೃದ್ಧಿ ಬ್ಯಾಂಕ್‌ಗಳಿಂದ ರೈತರು ಮತ್ತು ಸ್ವಸಹಾಯ ಸಂಘಗಳು ಪಡೆದಿರುವ ಎಲ್ಲಾ ರೀತಿಯ ಸಾಲಗಳ ಮರುಪಾವತಿ ಅವಧಿಯನ್ನು 3 ತಿಂಗಳು ವಿಸ್ತರಿಸಿ, ಸದ್ರಿ ಅವಧಿಯ ಬಡ್ಡಿಯನ್ನು ಭರಿಸುವ ನಿರ್ಧಾರವನ್ನು ಕೈಗೊಂಡಿದೆ. ಸರಕಾರದ ಸಮಯೋಚಿತ ನಿರ್ಧಾರದಿಂದ ಜಿಲ್ಲೆಯ ರೈತರನ್ನೊಳಗೊಂಡು ರಾಜ್ಯದ 4.25 ಲಕ್ಷ ರೈತರಿಗೆ ಇದು ಪ್ರಯೋಜನವಾಗಲಿದೆ. ಶ್ರಮಿಕ ವರ್ಗಕ್ಕೆ ರಾಜ್ಯ ಸರಕಾರವು 1250 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು ತೃಪ್ತಿದಾಯಕ ಬೆಳವಣಿಗೆಯಾಗಿದ್ದು, ರಾಜ್ಯದ ವಿವಿಧ ಸ್ತರದ ಬಡಜನತೆಗೆ ಇದು ಅನುಕೂಲವಾಗಲಿರುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!