ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ನೆರಿಯ ಗ್ರಾ.ಪಂ ಗೆ ಕೊವಿಡ್-19 ‘ಆಪ್ತರಕ್ಷಕ’ ವಾಹನ ಹಸ್ತಾಂತರ

ಬೆಳ್ತಂಗಡಿ : ಉಜಿರೆ “ಬದುಕು ಕಟ್ಟೋಣ ಬನ್ನಿ ” ತಂಡ ಮತ್ತು “ಬೆಳ್ತಂಗಡಿ ರೋಟರಿ ಕ್ಲಬ್ ” ಸಹಯೋಗದಲ್ಲಿ ಇಂದು ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಕೊವಿಡ್-19 “ಆಪ್ತರಕ್ಷಕ ” ವಾಹನವನ್ನು ನೆರಿಯ ಗ್ರಾ.ಪಂ ನಲ್ಲಿ ಬೆಳ್ತಂಗಡಿ ಮಾನ್ಯ ಶಾಸಕಾರದ ಹರೀಶ್ ಪೂಂಜ ರವರು ಅಧ್ಯಕ್ಷೆ ಹಾಗೂ ಪಿಡಿಓ ಗೆ ಕೀ ನೀಡುವ ಮೂಲಕ ಹಸ್ತಾಂತರ ಮಾಡಿದರು.

ನೆರಿಯ ಗ್ರಾ.ಪಂ ನ 6 ಜನ ಆಶಾ ಕಾರ್ಯಕರ್ತೆಯರು ಮತ್ತು ಒಬ್ಬರು ನರ್ಸ್ ಗೆ ಗೌರವಿಸಿ ಕಿಟ್ ವಿತರಿಸಲಾಯಿತು.

ಬೆಳ್ತಂಗಡಿ ಶಾಸಕರಾಗಿ ಮೂರು ವರ್ಷ ಪೂರೈಸಿದ್ದಕ್ಕಾಗಿ ಹರೀಶ್ ಪೂಂಜ ಅವರನ್ನು ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿಯವರು ಸನ್ಮಾನಿಸಿ ಗೌರವಿಸಿದರು.

ನೆರಿಯ ವೈದ್ಯಾಧಿಕಾರಿ ವಾಣಿ ಶ್ರೀ , ಅಧ್ಯಕ್ಷೆ ವಸಂತಿ , ನೆರಿಯ ಗ್ರಾ.ಪಂ ಅಬಿವೃದ್ಧಿ ಅಧಿಕಾರಿ ಗಾಯತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲರಾದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ,ಶಾಸಕರಾದ ಹರೀಶ್ ಪೂಂಜ, ನೆರಿಯ ಚರ್ಚ್ ಧರ್ಮಾಗುರುಗಳಾದ ಫಾದರ್ ಶಾಜು ಮ್ಯಾಥು, ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಾಲ , ನೆರಿಯ ಗ್ರಾ.ಪಂ ನೆರಿಯ ಗ್ರಾ.ಪಂ ಅಬಿವೃದ್ಧಿ ಅಧಿಕಾರಿ ಗಾಯತ್ರಿ, ನಿಯೋಜಿತ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೇಟ್ನಾಯ ,ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ್ ರಾವ್ ,ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್.ಕೆ.ವಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಶಿಧರ್.ಎಮ್.ಕಲ್ಮಂಜ, ನಿಯೋಜಿತ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕ್ಕರ್, ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ,ನೆರಿಯ ವೈದ್ಯಾಧಿಕಾರಿ ವಾಣಿ ಶ್ರೀ ,ತಾಲೂಕು ವೈದ್ಯಾಧಿಕಾರಿ ಕಲಾಮಧು, ಶ್ರೀಧರ್ ಮರಕಡ ಮತ್ತು ನೆರಿಯ ಗ್ರಾ.ಪಂ ಸಿಬ್ಬಂದಿ ಹಾಗೂ ಸದಸ್ಯರು ಭಾಗವಹಿಸಿದರು.

error: Content is protected !!