ರಕ್ತದಾನದ ಮೂಲಕ ಪ್ರಾಣ ಉಳಿಸುವ ಶ್ರೇಷ್ಠ ಕೆಲಸ ಮಾಡಬೇಕು: ಮಾಜಿ ಶಾಸಕ ವಸಂತ ಬಂಗೇರ: ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ‌ ಬೃಹತ್ ರಕ್ತದಾನ ಶಿಬಿರ

ಬೆಳ್ತಂಗಡಿ: ರಕ್ತದಾನ ಬದುಕಿನಲ್ಲಿ ನಾವು ಮಾಡಬಹುದಾದ ಶ್ರೇಷ್ಠ ದಾನ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ನಾವು ಬದುಕಿ ಇನ್ನೊಬ್ಬರ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಅಂತಹ ಶ್ರೇಷ್ಠ ಮನಸ್ಸನ್ನು ಬೆಳೆಸಿಕೊಂಡಿರಬೇಕು ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಮಂಗಳವಾರ ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ತಾಲ್ಲೂಕು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಬೆಳ್ತಂಗಡಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ತಾಲೂಕು ಘಟಕದ ಅಧ್ಯಕ್ಷ ಹರಿದಾಸ್ ಎಸ್.ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಕೊರೊನಾದಂತಹ ಮಹಾಮಾರಿಯ ಆತಂತಹದ ಮಧ್ಯೆಯೂ ಇನ್ನೊಬ್ಬರ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡುತ್ತಿರುವುದು ಮಹೋನ್ನತವಾದ ಸೇವಾ ಕಾರ್ಯ. ಇಂತಹ ಸೇವಾ ಮತ್ತು ಕಾಳಜಿಯನ್ನು ಜೀವನದುದ್ದಕ್ಕೂ ಬೆಳೆಸಿಕೊಳ್ಳಿ ಎಂದರು.

ಶಿಬಿರದಲ್ಲಿ 172 ರಕ್ತದಾನಿಗಳು ಭಾಗವಹಿಸಿದ್ದರು. 158 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ದ.ಕ. ಜಿಲ್ಲಾ. ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಎಸ್.ಎಂ., ಡಾ.ಜೆ.ಎಲ್.ಭಟ್, ಮಂಗಳೂರು ಬ್ಲಡ್ ಬ್ಯಾಂಕ್ ಸಂಯೋಜಕ ಪ್ರವೀಣ್, ರೆಡ್ ಕ್ರಾಸ್ ತಾಲೂಕು ಘಟಕದ ಕಾರ್ಯದರ್ಶಿ ಯಶವಂತ ಪಟವರ್ಧನ್, ಸದಸ್ಯೆ ಆಶಾ ಸುಜಿತ್ ವಕೀಲ ಮನೋಹರ್ ಇಳಂತಿಲ, ಶ್ರೀ ಗುರುದೇವ ಪಿಯು ಕಾಲೇಜು ಪ್ರಾಂಶುಪಾಲ ಸುಕೇಶ್ ಕುಮಾರ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್ ಬಿ. ಮೊದಲಾದವರು ಇದ್ದರು.

error: Content is protected !!