ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭ ತುರ್ತು ಸಹಾಯಕ್ಕಾಗಿ ಆಪ್ತ ರಕ್ಷಕ ವಾಹನವನ್ನು ಒದಗಿಸಿಕೊಟ್ಟರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಚ್. ಎಂ. ಅವರಿಗೆ ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಉಜಿರೆ ಹಾಗೂ ರಾಜೇಶ್ ಪೈ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ ರಾವ್ ಅವರು ಕೋವಿಡ್ ಸಂದರ್ಭ ಸಹಾಯಕ್ಕಾಗಿ ವಾಹನದ ಕೀಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ, ಸದಸ್ಯರಾದ ಜಗದೀಶ್ ಡಿ., ಲೋಕೇಶ್, ಗೌರಿ, ರಾಜಶ್ರೀ ರಮಣ್, ಇಂಜಿನಿಯರ್ ಮಹಾವೀರ ಅರಿಗ, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್.ಕೆ.ವಿ., ಪೂರ್ವಧ್ಯಕ್ಷ ಯಶವಂತ ಪಟ್ಟವರ್ದನ್, ಉದ್ಯಮಿಗಳಾದ ರವಿಚಂದ್ರ ಚಕ್ಕಿತ್ತಾಯ, ಜೈಸನ್ ಡಿಸೋಜ ಉಪಸ್ಥಿತರಿದ್ದರು.