ಬೆಂಗಳೂರು: ಅಕ್ಕಮತ್ತು ತಂಗಿ ಇಬ್ಬರನ್ನು ಒಬ್ಬ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆಯನ್ನು ವರಿಸಿದ ಹಿನ್ನೆಲೆ ವರ ಸೇರಿದಂತೆ ಒಟ್ಟು 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ, ಕಳೆದ ಮೇ 7ರಂದು ಸುಪ್ರಿಯ ಮತ್ತು ಲಲಿತ ಎಂಬ ಅಕ್ಕತಂಗಿಯರು, ಉಮಾಪತಿ ಎಂಬ ಒಬ್ಬನೇ ವರನನ್ನ ವರಿಸಿದ್ದರು. ಈ ಜೋಡಿಯ ಮದುವೆ ಫೋಟೊಗಳು ಹಾಗೂ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆ ಕುರಿತು ಪರಿಶೀಲನೆ ನಡೆಸಲು ಡಿಸಿ ಆರ್. ಸೆಲ್ವಮಣಿಯವರು ಆದೇಶಿಸಿದ್ದರು.
ಸದ್ಯ ಮದುವೆಯಾಗಿರುವ ಸಹೋದರಿಯರ ಪೈಕಿ ತಂಗಿ ಲಲಿತ ಅಪ್ರಾಪ್ತೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.