ತಾಲೂಕಿನ ಜನತೆಯ ತುರ್ತು ನೆರವಿಗೆ “ಶ್ರಮಿಕ” ಸ್ಪಂದನಾ ಕೊರೊನಾ ವಾರ್ ರೂಂ ಕಾರ್ಯಾರಂಭ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ ಸೇವಾ ಭಾರತಿ ಜತೆಗೂಡಿ ಕೋವಿಡ್-19 ಶ್ರಮಿಕ ಸ್ಪಂದನಾ ಕೇಂದ್ರ ಎಂಬ ವಾರ್ ರೂಮ್ ತೆರೆಯಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ತಾಲೂಕಿನ ಜನತೆ ಅಗತ್ಯ ನೆರವು ಪಡೆಯಬಹುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಬುಧವಾರ ಉಜಿರೆಯ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಸೇವಾ ಭಾರತಿ ಮೂಲಕ ನಡೆಯುವ ವಾರ್ ರೂಮ್ ಸೇವಾ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದರು.

 

ತುರ್ತು ಸೇವಾ ಸಹಾಯವಾಣಿ ಮೂಲಕ ಕೋವಿಡ್ ಸೇವಾ ಕೇಂದ್ರದ ಮಾಹಿತಿ:

ಕೋವಿಡ್-19 ತುರ್ತು ಸೇವಾ ಸಹಾಯವಾಣಿ ಮೂಲಕ ಕೋವಿಡ್ ಸೇವಾ ತಂಡವನ್ನು ಸಂಪರ್ಕಿಸಬಹುದಾಗಿದ್ದು, ಇದಕ್ಕಾಗಿ ಸ್ವಯಂಸೇವಕರನ್ನು ನೇಮಿಸಲಾಗಿದೆ. ಸಹಾಯವಾಣಿ, ಆಸ್ಪತ್ರೆ ಮಾಹಿತಿ, ಆಯುಷ್ಮಾನ್ ಮಾಹಿತಿ, ಆಂಬ್ಯುಲೆನ್ಸ್, ವ್ಯಾಕ್ಸಿನೇಷನ್ ಸೇರಿದಂತೆ ಪ್ರತಿಯೊಂದರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿ, ಸೇವಾ ಚಟುವಟಿಕೆಯ ಕುರಿತು ಸಲಹೆ ನೀಡಿದರು.

ಈ ವೇಳೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಮತ್ತು ಗಣೇಶ್ ಗೌಡ, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಸೇರಿದಂತೆ ಸ್ವಯಂಸೇವಕರು ಉಪಸ್ಥಿತರಿದ್ದರು.

error: Content is protected !!