ಕೊರೊನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಆಟೋದಲ್ಲಿ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದ ಮುಂಡಾಜೆ ರಿಕ್ಷಾ ಚಾಲಕ

 

ಬೆಳ್ತಂಗಡಿ: ಕೊರೊನಾ ಸೋಂಕಿತರು ಎಂದರೆ ಯಾರೂ ಕೂಡ ಹತ್ತಿರ ಸುಳಿಯುವುದಕ್ಕೂ ಭಯಪಡುವ ಸಮಯದಲ್ಲಿ ಅಂಬುಲೆನ್ಸ್ ಬರುವಾಗ ತಡವಾಗುತ್ತದೆ ಎಂದು ತಿಳಿದ ರಿಕ್ಷಾ ಚಾಲಕರೊಬ್ಬರು ತನ್ನ ರಿಕ್ಷಾದಲ್ಲೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.

ಕೇರಳ ಮೂಲದ ಮುಂಡಾಜೆಯ ವ್ಯಕ್ತಿಯೋರ್ವರಿಗೆ ಕೋರೊನಾ ಇರುವ ಬಗ್ಗೆ ಮುಂಡಾಜೆ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದು ಆ ಸೋಂಕಿತ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಆರೋಗ್ಯ ಕೇಂದ್ರದಲ್ಲಿರುವ ಐಸೋಲೇಷನ್ ಕೇಂದ್ರಕ್ಕೆ ಕಳುಹಿಸಲು ಆಂಬುಲೆನ್ಸ್ ಕೇಳಲಾಗಿತ್ತು, ಆದರೆ ಸಕಾಲದಲ್ಲಿ ಆಂಬುಲೆನ್ಸ್ ಸಿಗದೇ ಇದ್ದಾಗ ಸ್ಥಳೀಯ ವೈದ್ಯಾಧಿಕಾರಿಗಳು ರಮೇಶ್ ಆಚಾರ್ಯ ಎಂಬವರಲ್ಲಿ ಈ ಬಗ್ಗೆ ವಿಷಯ ತಿಳಿಸಿ ಸೋಂಕಿತರನ್ನು ಬೆಳ್ತಂಗಡಿ ಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದರು, ಕೂಡಲೇ ಕಾರ್ಯಪ್ರವೃತ್ತರಾದ ರಮೇಶ್ ಅವರು ತಾನೇ ಸ್ವತಃ ಪಿಪಿಇ ಕಿಟ್ ಪರಿಕರಗಳನ್ನು ಧರಿಸಿಕೊಂಡು ತುರ್ತಾಗಿ ತನ್ನದೇ ಆಟೋದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ರಮೇಶ್ ಆಚಾರ್ಯ ಇವರು ಬೆಳ್ತಂಗಡಿ ಮಾನವ ಸ್ಪಂದನಾ ಕೋವಿಡ್ ಸೋಲ್ಜರ್ಸ್ ತಂಡದ ಸದಸ್ಯ ಅಲ್ಲದೆ ದಸಂಸ ಅಂಬೇಡ್ಕರ್ ವಾದ ಸಂಘಟನೆಯ ಸದಸ್ಯರಾಗಿದ್ದಾರೆ.ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!