ಬೆಚ್ಚಿಬಿದ್ದ ಕರ್ನಾಟಕ 48 ಸಾವಿರ ಮೀರಿದ ಕೊರೊನಾ ಕೇಸ್:  217 ಮಂದಿ ಕೊರೊನಾಗೆ ಬಲಿ

ಬೆಳ್ತಂಗಡಿ: ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನ ಹೆಚ್ಚಾಗುತ್ತಾ ಇರುವುದು ಆತಂಕಕ್ಕೀಡು ಮಾಡಿದೆ. ರಾಜ್ಯದಲ್ಲಿಂದು 48,296 ಕೇಸ್ ಗಳು ದೃಢ ಪಟ್ಟಿದೆ. 217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇವತ್ತು 14884 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಈವರೆಗೆ 11,24,909 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇವರೆಗೆ ಒಟ್ಟು ಸೋಂಕಿತರ ಸಂಖ್ಯೆ 15,23,142 ಇದೆ. 3,82,690 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಇವತ್ತು 1205 ಕೊರೊನಾ ಪ್ರಕರಣ ದಾಖಲಾಗಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಕೊರೊನಾಗೆ ಈವರೆಗೆ ಬಲಿಯಾದವರ ಸಂಖ್ಯೆ 757 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 45109 ಪಾಸಿಟಿವ್ ಕೇಸ್ ಇದೆ. 6486 ಅ್ಯಕ್ಟೀವ್ ಕೇಸ್ ಜಿಲ್ಲೆಯಲ್ಲಿದ್ದು 380 ಮಂದಿ ಗುಣಮುಖವಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಇವತ್ತು 162 ಸೋಂಕು ಪ್ರಕರಣ ದಾಖಲಾಗಿದೆ. ಸರಕಾರ ಮಾರ್ಗಸೂಚಿಯಂತೆ ಹಲವಾರು ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದ್ದರೂ ಅಗತ್ಯ ಕಾರ್ಯಕ್ರಮಗಳು ನಡೆಯುತ್ತಿದೆ.

ಕೋವಿಡ್ ನಿಯಮ ಪಾಲನೆಯನ್ನು ಮಾಡಿಕೊಂಡು ಶುಭ ಕಾರ್ಯಗಳಿಗೆ 50 ಮಂದಿ ಮೀರದಂತೆ ಕಾರ್ಯಕ್ರಮ ನಡೆಸಿದರೂ ಕೆಲವೊಂದು ಕಡೆಗಳಲ್ಲಿ ಅನಿವಾರ್ಯವಾಗಿ ನಿಯಮ ಮೀರಿ ಕಾರ್ಯಕ್ರಮಗಳು ನಡೆಯುತ್ತಿದೆ. ಇಲಾಖೆಗಳು ಎಷ್ಟೇ ಕಡಿವಾಣ ಹಾಕಿದರೂ ಅನಗತ್ಯ ಓಡಾಟ ನಡೆಸುವವರೆ ಜಾಸ್ತಿ. ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದೆ. ಅನಗತ್ಯ ಓಡಾಟ ನಡೆಸುವವರಿಗೆ ಎಚ್ಚರಿಕೆ ನೀಡಿ ಬಿಡಲಾಗುತ್ತಿದೆ. ಇವೆಲ್ಲದರ ಮಧ್ಯೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ತಾಲೂಕಿನಲ್ಲಿ ಬುಧವಾರ ಸೋಂಕಿತರು 93 ಗುರುವಾರ 43 ಪ್ರಕರಣ ದಾಖಲಾಗಿತ್ತು. ಅದರೆ ಇವತ್ತು ಶುಕ್ರವಾರ 162 ಪ್ರಕರಣ ದಾಖಲಾಗಿದೆ. ಎಪ್ರಿಲ್‌ನಿಂದ ಇಂದಿನ ವರೆಗೆ ಒಟ್ಟು 617 ಸೋಂಕಿತರ ಪ್ರಕರಣ ದಾಖಲಾಗಿದ್ದು, ಇದೀಗ 343 ಸಕ್ರಿಯ ಪ್ರಕರಣವಾಗಿದೆ. ಇದರಲ್ಲಿ 27 ಮಂದಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಖಾಸಗಿ ಆಸ್ಪತ್ರೆ ಹಾಗೂ ವೆನ್‌ಲಾಕ್ ಆಸ್ಪತ್ರೆಯಲ್ಲಿ, ಮನೆಗಳಲ್ಲಿ ಹೋಂ ಐಸೊಲೇಶನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

error: Content is protected !!