ಬೆಳ್ತಂಗಡಿ ಕೊರೊನಾ ಕರ್ಪ್ಯೂ ಗೆ ಉತ್ತಮ ಸ್ಪಂದನೆ: ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದ ಪೊಲೀಸರು

ಬೆಳ್ತಂಗಡಿ: ಕರ್ಫ್ಯೂ ಮಾದರಿಯ ಲಾಕ್‌ಡೌನ್ ಮೂರನೇ ದಿನ ಶುಕ್ರವಾರದಂದು ತಾಲೂಕಿನ ಪ್ರಮುಖ ಪೇಟೆಗಳು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಉತ್ತಮ ಸ್ಪಂದನೆ ದೊರಕಿದೆ.

ಬೆಳಗ್ಗೆ 6 ಗಂಟೆಯಿಂದ 10ರ ತನಕ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು.

ಅಗತ್ಯ ವಸ್ತುಗಳ ಖರೀದಿಗೆ ಲಾಕ್‌ಡೌನ್ ಸಂದರ್ಭ ಸಡಿಲಿಕೆ ಇದ್ದುದರಿಂದ ಜನರ ಹಾಗೂ ವಾಹನಗಳ ಭರಾಟೆ ಜೋರಾಗಿತ್ತು. ಬಳಿಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟರೂ ವಾಹನಗಳ ಓಡಾಟ ಮಾತ್ರ ಇತ್ತು.

ಸರಕಾರಿ, ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಇಲಾಖೆ ಕಚೇರಿಗಳು ತೆರೆದಿದ್ದರೂ ಜನರ ಓಡಾಟ ಮಾತ್ರ ವಿರಳವಾಗಿತ್ತು. ತಮ್ಮ ವಾಹನಗಳಿಗೆ ಪಾಸ್ ಮಾಡಿಸಿಕೊಂಡ ಅಗತ್ಯ ವಸ್ತುಗಳ ವಾಹನಗಳ ಓಡಾಟ ಎಂದಿನಂತೆ ಇತ್ತು. ಹಾಲು, ತರಕಾರಿ, ಮೀನು, ಮಾಂಸದಂಗಡಿ, ಬೇಕರಿ ಮಳಿಗೆಗಳು, ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಜನರು ಬೆಳಗ್ಗೆ ಹಾಜರಾಗಿದ್ದರು.

ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ, ಮಡಂತ್ಯಾರು, ಕಲ್ಲೇರಿ, ಧರ್ಮಸ್ಥಳ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ಬೆಳಗ್ಗೆ 10 ಗಂಟೆಗಳ ಬಳಿಕ ಅನಗತ್ಯ ಓಡಾಟ ನಡೆಸುವ ಓಡಾಡುತ್ತಿರುವವರಿಗೆ ಪೊಲೀಸರು ಎಚ್ಚರಿಕೆ ನೀಡುವ ಕಾರ್ಯ ಮಾಡಿದರು. ಆದರೂ ವಿನಾ ಕಾರಣ ನೆಪದಲ್ಲಿ ಅನಗತ್ಯ ವಾಹನಗಳ ಓಡಾಟದ ಭರಟೆ ಮಾತ್ರ ಮುಂದುವರಿದಿತ್ತು. ಪೊಲೀಸರು ಸಾಧ್ಯವಾದಷ್ಟು ಅನಗತ್ಯವಾಗಿ ಓಡಾಟ ನಡೆಸುವವರಿಗೆ ಕಡಿವಾಣ ಹಾಕಿದ್ದಾರೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾರ್ಗದರ್ಶನದಲ್ಲಿ ಆಯಾಯ ಠಾಣೆಯ ಎಸ್‌ಐಗಳಾದ ನಂದ ಕುಮಾರ್, ಸೌಮ್ಯ, ಲೋಲಾಕ್ಷ, ಪವನ್ ಕುಮಾರ್ ಹಾಗೂ ಒಡಿಯಪ್ಪ ನೇತೃತ್ವದಲ್ಲಿ ಪೊಲೀಸರ ತಂಡ ಸೂಕ್ತ ಬಂದೋಬಸ್ತು ಮಾಡಿದ್ದರು. ಮಾಸ್ಕ್ ಧರಿಸದೇ ಓಡಾಟ ನಡೆಸಿದವರ ಮೇಲೆ ದಂಡ ವಿಧಿಸುವ ಕಾರ್ಯ ನಡೆದಿದೆ.

error: Content is protected !!