ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಬ್ಬರಿಸುತ್ತಿದೆ ಕೊರೊನಾ: ಈದಿನ 4 ಬಲಿ 664 ಪಾಸಿಟಿವ್: ಬೆಳ್ತಂಗಡಿಯಲ್ಲಿ ಇಂದು 93 ಪಾಸಿಟಿವ್

ಬೆಳ್ತಂಗಡಿ : ಕೊರೊನಾ ಅಬ್ಬರ ದಿನದಿಂದ ದಿನೇ ಇಡೀ ರಾಜ್ಯದಲ್ಲಿ ಹೆಚ್ಚಾಗುತ್ತಾ ಇದೆ ಈಗಾಗಲೇ ಬೆಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆ ಈಗಾಗಲೇ ಹೊರ ಜಿಲ್ಲೆಗಳಿಂದ ಊರಿಗೆ ತುಂಬಾ ಜನ ವಾಪಸ್ಸಾಗುತ್ತಿದ್ದಾರೆ.

ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದೆ. ಜಿಲ್ಲಾಡಳಿತದ ಅಂಕಿ ಅಂಶಗಳು ದಿನದಿಂದ ದಿನಕ್ಕೆ ಏರಿಕೆಯಾದ ಕುರಿತು ತಿಳಿಸುತ್ತಿದೆ. ಇಂದು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ನಾಲ್ವರು ಮರಣ ಹೊಂದಿದರೆ, 664 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಬೆಳ್ತಂಗಡಿಯಲ್ಲಿ ಇವತ್ತು 93 ಪಾಸಿಟಿವ್ ಕೇಸ್ ದಾಖಲಾಗಿದೆ ಒಟ್ಟು 304 ಸೋಂಕಿತರಿದ್ದು 40 ಮಂದಿ ಆಸ್ಪತ್ರೆಯಲ್ಲಿ ಇದ್ದಾರೆ ಹಾಗೂ 264 ಮಂದಿ ಹೋಮ್ ಐಸೋಲೆಶನ್ ನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 42, 729 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಸದ್ಯಕ್ಕೆ 4,694 ಸಕ್ರಿಯ ಪ್ರಕರಣಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 256 ಮಂದಿ ಕೋವಿಡ್ ಮುಕ್ತರಾಗಿ ಮನೆ ಸೇರಿದ್ದಾರೆ. ಇಂದಿನ ನಾಲ್ಕು ಮಂದಿ ಮೃತರಾಗಿರುವ ಸಂಖ್ಯೆಯೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ 755ಕ್ಕೇರಿದೆ.

error: Content is protected !!