ಕೊರಂಜ ಉನ್ನತೀಕರಿಸಿದ ಸ.ಹಿ.ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಹರೀಶ್ ಕುಮಾರ್ ಉಪಾಧ್ಯಕ್ಷೆಯಾಗಿ ಅಸ್ಮಾ ಆಯ್ಕೆ

ಗೇರುಕಟ್ಟೆ : ಕೊರಂಜ ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷರಾಗಿ ಬಿ ಹರೀಶ್ ಕುಮಾರ್ ಉಪಾಧ್ಯಕ್ಷರಾಗಿ ಅಸ್ಮ ಆಯ್ಕೆ.

ದ ಕ ಜಿಲ್ಲೆಯ ಅತೀ ಹಿರಿಯ ಶಾಲೆಗಳಲ್ಲಿ ಒಂದಾದ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊರಂಜದ ಮುಂದಿನ ಮೂರು ವರ್ಷದ ಅವಧಿಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಕಳಿಯ ಗ್ರಾ.ಪಂ. ಸದಸ್ಯ ಹರೀಶ್ ಕುಮಾರ್ ಬೆರ್ಕೆತ್ತೋಡಿ ಆಯ್ಕೆಯಾಗಿದ್ದಾರೆ.

20-04-2021 ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ ಗೌಡ ಕೆ ಅವರ ಸೂಚನೆಯಂತೆ ಗ್ರಾ ಪಂ. ಸದಸ್ಯ ಸುಧಾಕರ ಮಜಲು ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು.‌ ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಕೆ.ಎಮ್. ಅಬ್ದುಲ್ ಕರೀಮ್. ಯಶೋದರ ಶೆಟ್ಟಿ ಕೊರಂಜ, ಗುರುವಾಯನಕೆರೆ ವಲಯದ ಸಿ ಆರ್ ಪಿ ರಾಜೇಶ್, ಮುಖ್ಯೋಪಾದ್ಯಾಯಿನಿ ಶಾಂತಾ ಎಸ್. ಉಪಸ್ಥಿತರಿದ್ದರು. ‌

ಉಪಾಧ್ಯಕ್ಷರಾಗಿ ಅಸ್ಮ, ಸದಸ್ಯರುಗಳಾಗಿ ಜಿ.ಅಬ್ದುಲ್ ಖಾದರ್, ಜ್ಯೋತಿ ಚಂದ್ರಶೇಖರ್, ಚಂದ್ರಮೋಹನ್ ನಾಯ್ಕ್, ಜಿ.ಎಚ್. ಸಿದ್ಧೀಕ್, ಎ.ಮಹಮ್ಮದ್ ನಝೀರ್, ಜಿ. ಹನೀಫ್, ಜಿ.ಎ.ಅಬೂಬಕ್ಕರ್ ಸಿದ್ದೀಕ್, ಶೇಖರ ಎಂ., ಐತಪ್ಪ ಬಟ್ಟೆ ಮಾರು, ನಸೀಮಾ, ಕುಲ್ ಸಮ್, ನಝೀಮ, ಮೋಹಿನಿ, ಗಾಯತ್ರಿ, ಶಾಲಿನಿ.,ವನಿತಾ ವಿ., ಆಯ್ಕೆಯಾದರು. ಪದ ನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಶಾಂತಾ ಎಸ್., ಪಂಚಾಯತಿ ಪ್ರತಿನಿಧಿಯಾಗಿ ಯಶೋದರ ಶೆಟ್ಟಿ ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ. ಆಶಾ ಕಾರ್ಯಕರ್ತೆ ಪ್ರತಿಭಾ ಪದನಿಮಿತ್ತ ಸದಸ್ಯರಾಗಿ ಆಯ್ಕೆ ಯಾದರು.

ಶಿಕ್ಷಕಿ ಜಾನಕಿ ವಿ.ಪಟಗಾರ್ ಸ್ವಾಗತಿಸಿದರು. ಶಿಕ್ಷಕಿ ಶ್ರೀವಿಧ್ಯಾ ಧನ್ಯವಾದವಿತ್ತರು. ಶಿಕ್ಷಕ ರವಿರಾಜ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!