ದೇಶದಲ್ಲಿ ಲಾಕ್ ಡೌನ್ ಕೊನೆಯ ಅಸ್ತ್ರವಾಗಿರಲಿ, ಅದಕ್ಕೆ ಅವಕಾಶ ನೀಡಬೇಡಿ, ದೇಶದ ಜನರಲ್ಲಿ, ಪ್ರದಾನಿ ಮೋದಿ ಮನವಿ: ಕೊರೊನಾ ಹಿಮ್ಮೆಟ್ಟಿಸಲು ಎಲ್ಲರೂ ಸೇರಿ ಕೆಲಸ ಮಾಡೋಣ

ದೆಹಲಿ: ಮಹಾಮಾರಿ ಕೊರೊನಾ ಎರಡನೇ ಅಲೆ ದೇಶದಲ್ಲಿ ಆತಂಕ ಸೃಷ್ಟಿಸುತ್ತಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದು ದೇಶದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಕೊರೊನಾ ಬಂದಾಗ ಯಾವುದೇ ಲ್ಯಾಬ್​ ಇರಲಿಲ್ಲ, ಪಿಪಿಇ ಕಿಟ್​​ ಇರಲಿಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ ಅವುಗಳನ್ನ ಉತ್ಪಾದಿಸಿ ಜನರಿಗೆ ನೀಡುತ್ತಿದ್ದೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ದೈರ್ಯದಿಂದ ಇರಿ, ಕೊರೊನಾ ಓಡಿಸಿ. ಎಲ್ಲರಿಗೂ ಲಸಿಕೆ ನೀಡುವುದೇ ಸರ್ಕಾರದ ಉದ್ದೇಶ. ಆ ಗುರಿ ಸಾಧಿಸುತ್ತಿವೆ.ಯಾವುದೇ ಕಾರಣಕ್ಕೂ ಯಾರೂ ನಗರಗಳನ್ನ ತೊರೆಯಬೇಡಿ, ಗುಳೆ ಹೋಗಬೇಡಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ.2ನೇ ಬಾರಿಗೆ ದೇಶ ಕೊರೊನಾ ವೈರಸ್​ಗೆ ತುತ್ತಾಗಿದೆ. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಈ ಬಗ್ಗೆ ಸುದ್ದಿ ಮಾಧ್ಯಮಗಳು ಜನರಿಗೆ ತಿಳಿ ಹೇಳಿ ಎಂದು ಮನವಿ ಮಾಡಿದರು.

ಕೊರೊನಾ ಮಾಹಾಮಾರಿ ದೇಶದಲ್ಲಿ ಆತಂಕ ಸೃಷ್ಟಿ ಮಾಡಿದೆ. ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಬಿಡುವಿಲ್ಲದೇ ಕೆಲಸ ಮಾಡುತಿದ್ದಾರೆ. ದೇಶದ ಜನರ ಪ್ರಾಣ ಕಾಪಾಡಲು ಹಗಲಿರುಳು ದುಡಿಯುತ್ತಿದ್ದಾರೆ. ಕೊರೊನಾ ವಿರುದ್ಧ ದೇಶ ಮತ್ತೊಮ್ಮೆ ಹೋರಾಟ ನಡೆಸಿದೆ. ನಿಮ್ಮ ಕುಟುಂಬದ ಸದಸ್ಯನಾಗಿ ನಾವೂ ನಿಮ್ಮ ದುಃಖದಲ್ಲಿ ಭಾಗಿ. ಆಕ್ಸಿಜನ್ ಪೂರೈಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಎಂಥಾ ಸಂಕಷ್ಟದಲ್ಲೂ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ.

ವ್ಯಾಕ್ಸಿನ್ ಜತೆ ಬೆಡ್​ ಹೆಚ್ಚಿಸಲು ದೇಶದಲ್ಲಿ ಎಲ್ಲ ರೀತಿಯ ಕ್ರಮ ದೇಶದಲ್ಲಿ ಲಸಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವ್ಯಾಕ್ಸಿನ್​ ದೇಶದ ಪ್ರತಿಯೊಬ್ಬರಿಗೂ ತಲುಪಿಸಲು ಕ್ರಮ. ರಾಜ್ಯಗಳ ಜೊತೆ ಕೈಜೋಡಿಸಿ ವ್ಯಾಕ್ಸಿನ್​ ಹಂಚಿಕೆಗೆ ಮತ್ತಷ್ಟು ವೇಗ. ವೈದ್ಯರು ದೇಶದಲ್ಲಿ ಸಾವಿರಾರು ಜನರ ಜೀವ ಉಳಿಸಿದ್ದಾರೆ ಯಾವುದೇ ಕಾರಣಕ್ಕೂ ಇರುವ ಜಾಗ ಬಿಟ್ಟು ಬೇರೆ ಕಡೆ ಹೋಗಬೇಡಿ. ಯಾವುದೇ ಕಾರಣಕ್ಕೂ ಗುಳೆ ಹೋಗಬೇಡಿ ಎಂದು ಪ್ರದಾನಿ‌ ಮೋದಿ ಮನವಿ.

ಅತಿ ಕಡಿಮೆ ದರದಲ್ಲಿ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್​ ಲಭ್ಯ. ನೀವು ಇರುವ ಜಾಗದಲ್ಲೇ ಕೊರೊನಾ ವ್ಯಾಕ್ಸಿನ್​ ಪಡೆದುಕೊಳ್ಳಲು ವ್ಯವಸ್ಥೆ. ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ಎಲ್ಲರೂ ಸೇರಿ ಕೆಲಸ ಮಾಡೋಣ. ಯಾವುದೇ ಕೆಲಸವಿಲ್ಲದೇ ಮನೆಯ ಹಿರಿಯರು ಮನೆ ಬಿಟ್ಟು ಹೋಗಬೇಡಿ.

ನಮ್ಮಲ್ಲಿಗ ಅತ್ಯಾಧುನಿಕ ಲ್ಯಾಬ್, ಪಿಪಿಇ ಕಿಟ್ ಇದ್ದು, ಕೊರೊನಾ ವಿರುದ್ಧ ಹೋರಾಟ ದೇಶವನ್ನು ಇದೀಗ ಲಾಕ್​ಡೌನ್​​ದಿಂದ ಸೇಪ್​ ಮಾಡಬೇಕಾಗಿದ್ದು, ಅದನ್ನು ಕೊನೆ ಅಸ್ತ್ರವಾಗಿ ಬಳಿಸಿ ಸಣ್ಣ ಸಣ್ಣ ತಂಡ ಮಾಡಿಕೊಂಡು ಜಾಗೃತಿ ಮೂಡಿಸುವಂತೆ ನಮೋ ಮನವಿ.

error: Content is protected !!