ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ,ನಾಳೆಯಿಂದ ಬೆಂಗಳೂರಿನಲ್ಲಿ ಕಠಿನ ಕ್ರಮ: ಕಂದಾಯ ಸಚಿವ ಆರ್. ಅಶೋಕ್

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ‌ ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾದ್ಯಮದವರ ಜೊತೆ ಮಾತನಾಡಿ ಸದ್ಯಕ್ಕೆ ರಾಜ್ಯದಲ್ಲಿ ಲಾಕ್​ಡೌನ್ ಅವಶ್ಯಕತೆ ಇಲ್ಲ. ಸರ್ಕಾರದ ‌ಮುಂದೆಯೂ ಲಾಕ್​ಡೌನ್ ಪ್ರಸ್ತಾವ ಇಲ್ಲ. ಆದರೆ ಬೆಂಗಳೂರಿನಲ್ಲಿ ನಾಳೆ ಕಠಿನ ನಿಯಮಗಳು ಜಾರಿ ಖಚಿತ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು.

ಲಾಕ್​ಡೌನ್​ನಿಂದ ಈಗಾಗಲೇ ತುಂಬಾ ಸಮಸ್ಯೆ ಆಗಿದೆ. ಹಾಗಾಗಿ ಲಾಕ್​ಡೌನ್ ಹೊರತುಪಡಿಸಿ ಬಿಗಿ ಕ್ರಮ ಜಾರಿಗೊಳಿಸಲಾಗುತ್ತದೆ ಎಂದರು.

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ ಮಾಡುತ್ತೇವೆ. ಕೋವಿಡ್ ತಜ್ಞರು ಟಫ್ ರೂಲ್ಸ್ ಮಾಡಿ ಎಂದಿದ್ದಾರೆ. ಆದರೆ ಜನಸಾಮಾನ್ಯರ ಬದುಕು ನೋಡಬೇಕು. ಆ ದೃಷ್ಟಿಯಿಂದ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಲಾಕ್​ಡೌನ್ ಬೇಡ ಅಂತಾ ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ನಾಳೆ ಏನೇ ತೀರ್ಮಾನ ಆದರೂ ಸಿಎಂ ಗಮನಕ್ಕೆ ತರುತ್ತೇನೆ. ಒಟ್ಟಾರೆ ನಾಳೆಯಂತೂ ಬೆಂಗಳೂರಿಗೆ ಟಫ್ ರೂಲ್ಸ್ ಜಾರಿ ಮಾಡೇ ಮಾಡುತ್ತೇವೆ. ಜನರು ಆದಷ್ಟು ಮದುವೆ, ಬೀಗರಕೂಟ, ಇನ್ನಿತರ ಕಾರ್ಯಕ್ರಮಗಳನ್ನು ದೂರ ಇಡಬೇಕು. ನಾಳೆ ಸರ್ಕಾರ ಜಾರಿ ಮಾಡುವ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷ, ನಾನಗಿದ್ದು ಅಧ್ಯಕ್ಷರು ಸಿಎಂ ಯಡಿಯೂರಪ್ಪ ಆಗಿದ್ದಾರೆ. ಅದರೆ ಸಿಎಂ ಆಸ್ಪತ್ರೆಯಲ್ಲಿ ಇರುವ ಕಾರಣ, ನಾನು ಉಪಾಧ್ಯಕ್ಷನಾಗಿ ಸಭೆ ಮಾಡುತ್ತಿದ್ದೇನೆ. ಯಾಕೆಂದರೆ ಕೊರೊನಾ ನಿರ್ವಹಣೆಗೆ ಹಣ ಬಿಡುಗಡೆ ಮಾಡಬೇಕು ಅಂದರೆ ನಾನೇ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಲೆಕ್ಕದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾನೇ ಮಾಹಿತಿ ಕೊಡಬೇಕು. ಅದಕ್ಕಾಗಿ ನನ್ನ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ ಅಷ್ಟೇ. ಸಿಎಂ ಆದೇಶದ ಮೇರೆಗೆ ನಾನು ಸಭೆ ಮಾಡುತ್ತಿದ್ದೇನೆ. ಇದರಲ್ಲೇನು ಯಾವುದೇ ರಾಜಕೀಯ ಇಲ್ಲ ಎಂದು ಆರ್​.ಅಶೋಕ್​ ಸ್ಪಷ್ಟಪಡಿಸಿದರು.

error: Content is protected !!