ಲಾಯಿಲ ಗ್ರಾಮ ಪಂಚಾಯತ್ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಎಣಿಂಜೆ, ಉಪಾಧ್ಯಕ್ಷರಾಗಿ ಲಕ್ಷಣ ಪೂಜಾರಿ ಕೈಪ್ಲೋಡಿ ಆಯ್ಕೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾಗಿ ಒಂದನೇ ವಾರ್ಡಿನ‌ ಸದಸ್ಯ ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ ಉಪಾಧ್ಯಕ್ಷರಾಗಿ ನಿವೃತ್ತ ಅಧ್ಯಾಪಕ ಲಕ್ಷಣ ಪೂಜಾರಿ ಕೈಪ್ಲೋಡಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸರ್ಕಾರದ ಸುತ್ತೋಲೆಯಂತೆ ಗ್ರಾಮದ ವಿಶೇಷ ಗ್ರಾಮ ಸಭೆಯನ್ನು ಕರೆದು ಗ್ರಾಮಸ್ಥರ ಹಾಗೂ ಗ್ರಾ.ಪಂ ಸದಸ್ಯರುಗಳ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರನ್ನಾಗಿ ಪ್ರಸಾದ್ ಶೆಟ್ಟಿ ಉಪಾಧ್ಯಕ್ಷರಾಗಿ ನಾಮನಿರ್ದೇಶಿತ ಲಕ್ಷಣ ಪೂಜಾರಿ ಇವರನ್ನು ಆಯ್ಕೆ ಮಾಡುವಂತೆ ಸಭೆಯಲ್ಲಿದ್ದ ಗ್ರಾಮಸ್ಥರು ಸೂಚಿಸಿದರು. ಇದಕ್ಕೆ ಗ್ರಾ ಪಂ ಸದಸ್ಯರುಗಳು ಒಪ್ಪಿಗೆ ಸೂಚಿಸಿ ಅದರಂತೆ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಲಾಯಿಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ ಸದಸ್ಯರುಗಳಾಗಿ ಗ್ರಾ.ಪಂ ಸದಸ್ಯ ಮಹೇಶ್ ಕುಲಾಲ್, ಆಶಾಲತಾ, ರಜನಿ, ಸಂಘ ಸಂಸ್ಥೆಗಳ ಪರವಾಗಿ, ಯಶೋದ ರಾಘವೇಂದ್ರ ನಗರ, ರಹಿಮಾನ್ ಕುಂಟಿನಿ, ಮಸುರ ಕುಂಟಿನಿ, ವಿನೋದ ಹರೀಶ್ ರಾಘವೇಂದ್ರ ನಗರ ಆಯ್ಕೆಯಾದರು.

‌ಸಭೆಯ ಅಧ್ಯಕ್ಷತೆಯನ್ನು ಲಾಯಿಲ ಗ್ರಾ ಪಂ ಅಧ್ಯಕ್ಷೆ ಆಶಾ ಬೆನಡಿಕ್ಟಾ ಸಲ್ಡಾನ ವಹಿಸಿದ್ದರು. ‌ಆಯ್ಕೆ ನಿಬಂಧನೆಗಳನ್ನು ಹಾಗೂ ಮಾಹಿತಿಗಳನ್ನು ಅಭಿವೃದ್ಧಿ ಅಧಿಕಾರಿ ವೆಂಕಟರಾಜಕೃಷ್ಣ ಸಭೆಗೆ ತಿಳಿಸಿದರು. ಕೊರೊನಾ ಮುಂಜಾಗರೂಕತೆ ಬಗ್ಗೆ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಲಾಯ್ಲ, ತಾ.ಪಂ ಸದಸ್ಯ ಸುಧಾಕರ, ಗ್ರಾ.ಪಂ ಸದಸ್ಯರುಗಳು, ಗ್ರಾ.ಪಂ ಲೆಕ್ಕಪರಿಶೋದಕಿ ರೇಶ್ಮಾ ಮ.ಗಂಜಿಗಟ್ಟಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.ಕಾರ್ಯದರ್ಶಿ ಪುಟ್ಟಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!