ಕ್ರೀಡಾ ಪಟುಗಳ ಕಷ್ಟಕ್ಕೆ ಸ್ಪಂದಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ತೆಲಂಗಾಣದಲ್ಲಿ ನಡೆಯುತ್ತಿರುವ 47ನೇ ಜೂನಿಯರ್ ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಇಬ್ಬರು ಕಬಡ್ಡಿ ಆಟಗಾರರಾದ ಎಸ್. ಡಿ.ಎಂ ವಿದ್ಯಾರ್ಥಿ ಸುಶಾಂತ್ ಶೆಟ್ಟಿ ಹಾಗೂ ಕರ್ನಾಟಕ ಬಾಲಕಿಯರ ತಂಡದ ನಾಯಕಿಯಾಗಿ ಆಯ್ಕೆಯಾದ ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಅರ್ಚನಾ ಗೌಡ ಇವರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಕೇರಳ ಚುನಾವಣೆಯ ಪ್ರಚಾರದ ಒತ್ತಡದಲ್ಲಿ ಇದ್ದರೂ ತನ್ನ ತಾಲೂಕಿನ ಆಟಗಾರರು ರಾಜ್ಯ ತಂಡಕ್ಕೆ ಆಯ್ಕೆಯಾದ ಸುದ್ದಿ ತಿಳಿದು ಕೂಡಲೇ ಕ್ರೀಡಾಪಟುಗಳಿಗೆ ಶುಭ ಹಾರೈಸುವುದರ ಜೊತೆಗೆ ತನ್ನ ತಾಲೂಕಿನ ಪ್ರತಿಭೆಗಳಿಗೆ ಹಣಕಾಸಿನ ತೊಂದರೆಯಾಗದಿರಲೆಂದು ತಲಾ ರೂ 10,000 ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದ್ದಾರೆ.

ಸ್ವತಃ ಕಬಡ್ಡಿ ಆಟಗಾರರಾಗಿರುವ ಶಾಸಕ ಹರೀಶ ಪೂಂಜ ಕಳೆದ ವರ್ಷ ಕ್ರೀಡಾ ಪಟುಗಳಿಗೆ ಸರಕಾರಿ ಕೆಲಸಗಳಲ್ಲಿ ಕ್ರೀಡಾಕೋಟಾ ನೀಡಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿ ಮಾಡಿದ್ದರು.

error: Content is protected !!