ಆಡನ್ನು ಸುತ್ತಿಕೊಂಡ ರೀತಿಯಲ್ಲಿ ಸತ್ತು ಬಿದ್ದಿರುವ ಬೃಹತ್ ಗಾತ್ರದ ಹೆಬ್ಬಾವು ಪತ್ತೆ‌

ಬೆಳ್ತಂಗಡಿ: ಆಡೊಂದನ್ನು ಸುತ್ತಿಕೊಂಡ ರೀತಿಯಲ್ಲಿ ಸತ್ತು ಬಿದ್ದಿರುವ ಆಡು ಹಾಗೂ ಹೆಬ್ಬಾವು ಮೃತ ದೇಹಗಳು ರಸ್ತೆ ಬದಿ ಪತ್ತೆಯಾಗಿದೆ ಸವಣಾಲು ಕನ್ನಾಜೆ ರಸ್ತೆಯ‌ ಪರಂಟಾಜೆ ತಿರುವಿನಲ್ಲಿ ಸ್ಥಳೀಯರು ನೋಡಿದ್ದಾರೆ.

ಮೇಲ್ನೋಟಕ್ಕೆ ಯಾರೋ ಇದನ್ನು ಎಲ್ಲಿಂದಲೋ ತಂದು ಹಾಕಿರಬಹುದು ಎಂಬ ಅನುಮಾನ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಹೆಬ್ಬಾವು, ಆಡನ್ನು ನುಂಗಲು ಪ್ರಯತ್ನಿಸುವಾಗ ಆಡನ್ನು ರಕ್ಷಿಸಲು ಹಾವಿಗೆ ಹೊಡೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸತ್ತ ಮೇಲೆ ಈ ಸ್ಥಳದಲ್ಲಿ ರಸ್ತೆ ಬದಿ ತಂದು ಹಾಕಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.

ಸ್ಥಳೀಯರು ಸೇರಿ ಸತ್ತ ಹಾವು ಹಾಗೂ ಆಡನ್ನು ಗುಂಡಿ ತೋಡಿ ಮುಚ್ಚಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!