ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹ್ಯುದ್ದೀನ್ ದರ್ಗಾ ಶರೀಫ್ ನಲ್ಲಿ ಮಾ.22 ರಿಂದ ಮಾ.26ರವರೆಗೆಉರೂಸ್ ದ.ಕ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಬಿ.ಕೆ ರವೂಫ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬ್ದುಲ್ ಕರೀಂ ಗೇರುಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾ.22 ರಂದು ಪರಪ್ಪು ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಳತ್ತಳಿಕೆ ಧ್ವಜಾರೋಹಣ ಗೈಯ್ಯಲಿದ್ದಾರೆ. ಅಂದು ರಾತ್ರಿ ಸ್ವಲಾತ್ ವಾರ್ಷಿಕೋತ್ಸವದ ನೇತೃತ್ವವನ್ನು ಸಯ್ಯಿದ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ವಹಿಸಲಿದ್ದಾರೆ. ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ತಾಜುಲ್ ಉಲಮಾ ಅನುಸ್ಮರಣಾ ಪ್ರಭಾಷಣಗೈಯಲಿದ್ದಾರೆ. ಮಾ.23 ರಂದು ಕಮ್ಯುನಿಟಿ ಕಾನ್ಫರೆನ್ಸ್ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಎಸ್. ಎಮ್. ಕೋಯಾ ತಂಙಳ್ ಉದ್ಘಾಟಿಸಲಿದ್ದಾರೆ. ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು ಮುಖ್ಯ ಭಾಷಣಗೈಯಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ರಾಜ್ಯದ ಮಾಜಿ ಸಚಿವ ಯು.ಟಿ. ಖಾದರ್, ಎಂ.ಎಲ್.ಸಿ ಬಿ.ಎಂ.
ಫಾರೂಕ್, ರಾಜ್ಯ ಸರಕಾರದ ಅಧಿಕಾರಿ ಹಿದಾಯತ್ತುಲ್ಲ ಕೆ.ಎ., ಪ್ರಮುಖ ಗಣ್ಯರಾದ ಮೊಯಿದಿನ್ ಬಾವಾ, ಮೋನು ಹಾಜಿ ಕಣಚೂರು, ಅಶ್ರಫ್ ಮಾಚಾರು, ಶಾಹುಲ್ ಹಮೀದ್ ಕೆ.ಕೆ. ಲುಕ್ಮಾನ್ ಬಂಟ್ವಾಳ, ಮುಸ್ತಫಾ ಹಾಜಿ ಕೆಂಪಿ, ಶಾಕಿರ್ ಹಾಜಿ ಹೈಶಮ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಸಮಾರಂಭದ ರಾಷ್ಟಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್. ಕೊಯ್ಯೂರು ಮತ್ತು ಡಾಕ್ಟರೇಟ್ ಪದವಿ ಪಡೆದ ಶಿಕ್ಷಣ ಸಾಧಕ ಡಾ. ನಿಯಾಝ್ ಪಣಕಜೆ ಅವರಿಗೆ ಸನ್ಮಾನ ನಡೆಯಲಿದೆ.
ಮಾ.24 ರಂದು ನೌಫಲ್ ಸಖಾಫಿ ಕಳಸ, ಮಾ. 25 ರಂದು ಹಾಫಿಳ್ ಸುಫಿಯಾನ್ ಸಖಾಫಿ ಧಾರ್ಮಿಕ ಪ್ರವಚನ ನಡೆಸಿಕೊಡಲಿದ್ದಾರೆ.
ಮಾ.26 ರಂದು ಕೂರತ್ ತಂಙಳ್ ಅಧ್ಯಕ್ಷತೆಯಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಮತ್ತು ಉರೂಸ್ ಸಮಾರೋಪ ನಡೆಯಲಿದ್ದು, ಸಯ್ಯಿದ್ ಬಾಯಾರ್ ತಂಙಳ್ ದುಆ ಪ್ರಾರ್ಥನೆಗೆ ನೇತ್ರತ್ವ ನೀಡಲಿದ್ದಾರೆ. ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಭಾಷಣಗೈಯಲಿದ್ದಾರೆ. ಸಯ್ಯಿದ್ ಮನ್ಶರ್ ತಂಙಳ್ ಸಹಿತ ಉಲಮಾ ನಾಯಕರುಗಳು, ವಿವಿಧ ಕ್ಷೇತ್ರದ ಗಣ್ಯರುಗಳು ಭಾಗವಹಿಸಲಿದ್ದಾರೆ. ಕೊನೆಗೆ ಅನ್ನದಾನವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಖತೀಬ್ ಉಮರುಲ್ ಫಾರೂಖ್ ಸಖಾಫಿ ಶಾಂತಿನಗರ, ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪೆಳತ್ತಳಿಕೆ, ಉರೂಸ್ ಸಮಿತಿಯ ಕಾರ್ಯದರ್ಶಿ ಎಸ್. ಎ. ನೌಫಲ್ ಮತ್ತು ಕೋಶಾಧಿಕಾರಿ ಆಸಿಫ್ ಎಸ್. ಯು. ಉಪಸ್ಥಿತರಿದ್ದರು.