ಜಿಲ್ಲಾ ಮಟ್ಟದ ಬಾಲಕ, ಬಾಲಕಿಯರ ವಾಲಿಬಾಲ್ ಕ್ರೀಡಾಕೂಟ: ಎಸ್.ಡಿ.ಎಂ. ಕಾಲೇಜು ಪ್ರಥಮ

ಉಜಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದ ಎರಡು ವಿಭಾಗಳಲ್ಲೂ ಎಸ್.ಡಿ.ಎಂ. ಪಿ.ಯು‌. ಕ್ರೀಡಾಪಟುಗಳು ‌ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದ ಅಂತಿಮ ಹಣಾಹಣಿ ಎಸ್.ಡಿ.ಎಂ. ಕಾಲೇಜು ಉಜಿರೆ ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜು ನಡುವೆ ನಡೆದಿದ್ದು, ಅಂತಿಮವಾಗಿ ‌ಉಜಿರೆ ಎಸ್.ಡಿ.ಎಂ. ಪಿ.ಯು. ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು. ಮೂಡಬಿದಿರೆಯ ಆಳ್ವಾಸ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ವಯಕ್ತಿಕ ಪ್ರಶಸ್ತಿಯಲ್ಲಿ ಬೆಸ್ಟ್ ಪಾಸರ್ ಆಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಅಖಿಲ್ ಥಾಮಸ್, ಬೆಸ್ಟ್ ಆಲ್ರೌಂಡರ್ ಆಗಿ ಮೂಡಬಿದಿರೆ ಆಳ್ವಾಸ್ ನ ಸುಮಂತ್ ‌ಆಯ್ಕೆಯಾದರು.

ಬಾಲಕಿಯರ ವಿಭಾಗದಲ್ಲಿ ಉಜಿರೆ ‌ಎಸ್.ಡಿ.ಎಂ. ಪಿಯು ಕಾಲೇಜು ಪ್ರಥಮ ಸ್ಥಾನ ಪಡೆದರೆ, ಮಂಗಳೂರು ನಗರವನ್ನು ಪ್ರತಿನಿಧಿಸಿದ ಶಾರದಾ ಪಿಯು ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ವಯಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಉಜಿರೆ ‌ಎಸ್.ಡಿ.ಎಂ. ಪಿ.ಯು. ಕಾಲೇಜಿನ ತುಳಸಿ ಬೆಸ್ಟ್ ಅಟ್ಟ್ಯಾಕರ್, ಮಂಗಳೂರು ಶಾರದಾ ಪಿ.ಯು. ಕಾಲೇಜಿನ ನವ್ಯ ಬೆಸ್ಟ್ ಆಲ್-ರೌಂಡರ್ ಪ್ರಶಸ್ತಿ ಪಡೆದರು. ‌

ಉಜಿರೆ ಎಸ್.ಡಿ.ಎಂ. ಪಿ.ಯು‌. ಕಾಲೇಜು‌ ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ ವಿಜೇತರಿಗೆ ಬಹುಮಾನ‌ ವಿತರಿಸಿದರು.

ಉಪಪ್ರಾಂಶುಪಾಲ ಪ್ರಮೋದ್ ಕುಮಾರ್, ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಹೆಚ್., ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೇಶ್ ಪೂಂಜ, ಶಾರದಾ ಮೊದಲಾದವರು ಉಪಸ್ಥಿತರಿದ್ದರು.

error: Content is protected !!