ಮೇ 25ರಂದು ಪಾವಂಜೆಯಲ್ಲಿ‌ ಯಕ್ಷ ಧ್ರುವ ಪಟ್ಲ ಸಂಭ್ರಮ: ಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ‌ ನವಶಕ್ತಿ ಅಧ್ಯಕ್ಷತೆ: 2021 ಪಟ್ಲ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಸಂಭ್ರಮ- 2021 ಕಾರ್ಯಕ್ರಮ ಮೇ 25 ರಂದು ಪಾವಂಜೆ ಕ್ಷೇತ್ರದಲ್ಲಿ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಲ ಪ್ರಶಸ್ತಿ- 2021 ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ:
ಪಟ್ಲ ಪ್ರಶಸ್ತಿ- 2021 ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ರೂ. 1 ಲಕ್ಷ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಫಲಕದೊಂದಿಗೆ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮ:
ಅಬ್ಬರತಾಳ- ಪೂರ್ವರಂಗ – ಗಾನ ವೈಭವ – ಮಹಿಳಾ ಯಕ್ಷಗಾನ – ತಾಳ ಮದ್ದಳೆ ಹಾಗೂ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ:
ಫಲಾನುಭವಿಗಳಿಗೆ ಸೇವಾ ಯೋಜನೆಗಳು, ಅಶಕ್ತ ಕಲಾವಿದರಿಗೆ ರೂ. 50 ಸಾವಿರದ ಪರಿಹಾರ ಧನ, ಗೃಹ ನಿರ್ಮಾಣ/ರಿಪೇರಿಗೆ ಸಹಾಯ ಧನ, ವೈದ್ಯಕೀಯ ಚಿಕಿತ್ಸಾ ನೆರವು, ಯಕ್ಷ ಕಲಾ ಗೌರವ, ಕಲಾವಿದರ ಮಕ್ಕಳಿಗೆ (10 ಮತ್ತು 12ನೇ ತರಗತಿ) ವಿಧ್ಯಾರ್ಥಿ ವೇತನ / ಪ್ರತಿಭಾ ಪುರಸ್ಕಾರ (2020-21ರಲ್ಲಿ SSLC ಮತ್ತು PUCಯವರಿಗೆ), ಉಭಯ ತಿಟ್ಟುಗಳ ಕಲಾವಿದರಿಗೆ ಅಪಘಾತ ವಿಮಾ ಯೋಜನೆ.

ಸಹಾಯಧನ ವಿತರಣೆ:
ತೆಂಕು ತಿಟ್ಟಿನ ಪ್ರಸಿದ್ಧ ಭಾಗವತರು, ಪ್ರಸಂಗಕರ್ತರು ಮತ್ತು ಕಟೀಲು ಮೇಳದ ಪ್ರಧಾನ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಆರೋಗ್ಯ ಚಿಕಿತ್ಸೆಗಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ರೂ. 50 ಸಾವಿರ ಆರ್ಥಿಕ ಸಹಾಯಧನ ನೀಡಲಾಯಿತು.

ಈ ಸಂದರ್ಭದಲ್ಲಿ ಅಮೇರಿಕಾದ ರಾಘವೇಂದ್ರ ಭಟ್ ನೀಡಿದ ಎರಡು ಲಕ್ಷ ರೂ ಚೆಕ್ಕನ್ನು ಉಪಾಧ್ಯಕ್ಷ ಪ್ರೊಫೆಸರ್ ಡಾ. ಮನು ರಾವ್ ಫೌಂಡೇಷನ್ ಗೆ ಹಸ್ತಾಂತರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪಟ್ಲಗುತ್ತು ಸತೀಶ್ ಶೆಟ್ಟಿ ವಹಿಸಿದ್ದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,‌ ಕೇಂದ್ರೀಯ ಸಮಿತಿ ಪದಾಧಿಕಾರಿಗಳು ಹಾಗೂ ಯಕ್ಷಗಾನದ ಹಿರಿಯರು ಉಪಸ್ಥಿತರಿದ್ದರು. ಪಟ್ಲ ಪೌಂಡೇಶನ್ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!